ADVERTISEMENT

ಡ್ರಗ್ಸ್‌ ದಂಧೆಯಲ್ಲಿ ಸಚಿವರಿದ್ದರೂ ಒಳಗೆ ಹಾಕಿ: ಅಪ್ಪಚ್ಚು ರಂಜನ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 2:02 IST
Last Updated 10 ಸೆಪ್ಟೆಂಬರ್ 2020, 2:02 IST
ಎಂ.ಪಿ.ಅಪ್ಪಚ್ಚು ರಂಜನ್‌
ಎಂ.ಪಿ.ಅಪ್ಪಚ್ಚು ರಂಜನ್‌   

ಮಡಿಕೇರಿ: ‘ಡ್ರಗ್ಸ್‌ ದಂಧೆಯಲ್ಲಿ ಸಚಿವರು ಅಥವಾ ಯಾವುದೇ ಪಕ್ಷದ ಶಾಸಕರಿದ್ದರೆ ಅವರನ್ನೂ ಒಳಗೆ ಹಾಕಬೇಕು’ ಎಂದು ಬಿಜೆಪಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಬುಧವಾರ ಇಲ್ಲಿ ಹೇಳಿದರು.

‘ನಾಲ್ಕು ಸಿನಿಮಾ ಮಾಡಿರುವ ನಟಿಯರು ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅದು ಹೇಗೆ ಸಾಧ್ಯವಾಯಿತು? ಆ ನಟಿಯರ ಸಂಭಾವನೆ ಎಷ್ಟಿತ್ತು ಎಂಬುದರ ಬಗ್ಗೆಯೂ ತನಿಖೆ ಆಗಬೇಕಿದೆ. ಅಕ್ರಮವಾಗಿ ಹಣ, ಆಸ್ತಿ ಸಂಪಾದನೆ ಮಾಡಿದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಡ್ರಗ್ಸ್‌ ಮಾರಾಟ, ಸೇವನೆ ಮಾಡಿದ್ದವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

‘ಕೆಲ ಪೊಲೀಸ್‌ ಅಧಿಕಾರಿಗಳೇ ಗಾಂಜಾ ಮಾರಾಟಗಾರರ ಜೊತೆಗೆ ಶಾಮೀಲಾಗಿರುವ ಮಾಹಿತಿಯಿದೆ. ಪೊಲೀಸರು ಹಣ ಪಡೆದು ‍ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ್ದಾರೆ’ ಎಂದು ದೂರಿದ ಅವರು, ಡ್ರಗ್ಸ್‌ ದಂಧೆ ಕೊನೆಯಾಗಬೇಕು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.