ADVERTISEMENT

ನಾಪೋಕ್ಲು | ಈಶ್ವರ ದೇಗುಲ ವಾರ್ಷಿಕೋತ್ಸವ 10ರಂದು

​ಪ್ರಜಾವಾಣಿ ವಾರ್ತೆ
Published 6 ಮೇ 2025, 5:24 IST
Last Updated 6 ಮೇ 2025, 5:24 IST
ನಾಪೋಕ್ಲುವಿನ ಮಹಾದೇವ ಕೋಟ ಈಶ್ವರ ದೇವರ ವಿಗ್ರಹ
ನಾಪೋಕ್ಲುವಿನ ಮಹಾದೇವ ಕೋಟ ಈಶ್ವರ ದೇವರ ವಿಗ್ರಹ   

ನಾಪೋಕ್ಲು: ಸಮೀಪದ ಈಸ್ಟ್ ಕೊಳಕೇರಿ ಮಹಾದೇವ ಕೋಟ ಈಶ್ವರ ದೇವಾಲಯದ ವಾರ್ಷಿಕೋತ್ಸವ ಮೇ 10ರಂದು ನಡೆಯಲಿದೆ.

ಬೆಳಿಗ್ಗೆ 7ರಿಂದ 8 ಗಂಟೆವರೆಗೆ ಗಣಹೋಮ, 9ರಿಂದ ಮಧ್ಯಾಹ್ನ 12 ಗಂಟೆವರೆಗೆ ಶತರುದ್ರಾಭಿಷೇಕ ಹಾಗೂ ರುದ್ರಾಭಿಷೇಕ, ಮಹಾ ಪೂಜೆ ನಡೆಯಲಿದೆ. ನಂತರ ಭಕ್ತರಿಗೆ ತೀರ್ಥ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT