ಮಡಿಕೇರಿ: ‘ಪ್ರಜಾವಾಣಿ’ಯ ಅರೆಕಾಲಿಕ ಛಾಯಾಗ್ರಾಹಕ ರಂಗಸ್ವಾಮಿ ಸೇರಿದಂತೆ 16 ಮಂದಿಗೆ ಭಾನುವಾರ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಯಪಂಡ ಶಶಿ ಸೋಮಯ್ಯ, ಎ.ಎನ್.ವಾಸು, ಕೆ.ಬಿ.ದಿವಾಕರ್, ಎಂ.ಎನ್.ಚಂದ್ರಮೋಹನ್, ಜಗದೀಶ್ ಜೋಡುಬೀಟಿ, ಅಣ್ಣೀರ ಹರೀಶ್ ಮಾದಪ್ಪ, ಎಚ್.ಕೆ. ಜಗದೀಶ್, ಸುನಿಲ್ ಪೊನ್ನೇಟಿ, ಹಿರಿಕರ ರವಿ, ವಿಷ್ಮಾ ಪೆಮ್ಮಯ್ಯ, ವಿಶ್ವ ಕುಂಬೂರು, ಮಲ್ಲಿಕಾರ್ಜುನ, ಕೃಷ್ಣ ಸಿದ್ದಾಪುರ, ಉದಿಯಂಡ ಜಯಂತಿ ಮಂದಣ್ಣ, ಅಜ್ಜಮಾಡ ರಮೇಶ್ ಕುಟ್ಟಪ್ಪ ವಿವಿಧ ಪ್ರಶಸ್ತಿ ಪಡೆದುಕೊಂಡರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಪಿಎಚ್‌ಡಿ ಪದವಿ ಪಡೆದ ಸಂಘದ ಸದಸ್ಯ ಹೇಮಂತ್, ರಾಜ್ಯ ಪ್ರಶಸ್ತಿ ಪಡೆದ ಬಾಚರಣಿಯಂಡ ಅನುಕಾರ್ಯಪ್ಪ, ಸಣ್ಣುವಂಡ ಕಿಶೋರ್ ನಾಚಪ್ಪ, ಅಕ್ಷಯ್, ರಾಜ್ಯದ ಉತ್ತಮ ಸಂಘ ಪ್ರಶಸ್ತಿ ಪಡೆದ ಪೊನ್ನಂಪೇಟೆ ತಾಲ್ಲೂಕು ಸಂಘ ಅಧ್ಯಕ್ಷ ಕಿಶೋರ್ ನಾಚಪ್ಪ ಅವರನ್ನು
ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು. ಸುಂಟಿಕೊಪ್ಪದ ಗ್ರಾಮ ಪಂಚಾಯಿತಿ ಸದಸ್ಯ ರಫೀಕ್ ಖಾನ್, ನಿವೃತ್ತ ಶಿರಸ್ತೇದಾರ್ ಪ್ರಕಾಶ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಕಾರ್ಯಕ್ರಮದ ಸಂಚಾಲಕಿ ಯಶೋಧಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.