ಗೋಣಿಕೊಪ್ಪಲು: ಚೋಟ್ಟಂಗಡ ತಂಡ ಕೋದಂಡ ತಂಡದ ಎದುರು 78 ರನ್‌ಗಳ ಭಾರಿ ಅಂತರದಿಂದ ಜಯಗಳಿಸಿತು.
ಹುದಿಕೇರಿ ಜನತಾ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚೆಕ್ಕೆರಾ ಕಪ್ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೋಟ್ಟಂಗಡ ತಂಡ ನಿಗದಿತ 8 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 126 ರನ್‌ಗಳ ಬೃಹತ್ ಮೊತ್ತ ಗಳಿಸಿತು.
ಬಳಿಕ ಬ್ಯಾಟಿಂಗ್ ನಡೆಸಿದ ಕೋದಂಡ ತಂಡ 8 ವಿಕೆಟ್‌ಗಳ ನಷ್ಟಕ್ಕೆ ಕೇವಲ 48 ರನ್ ಗಳಿಸಿ ನಿರಾಸೆ ಅನುಭವಿಸಿತು.
2ನೇ ಪಂದ್ಯದಲ್ಲಿ ಇಟ್ಟೀರ ತಂಡ ಕೊಕ್ಕೆಂಗಡ ತಂಡದ ಎದುರು 7 ವಿಕೆಟ್‌ಗಳಿಂದ ಜಯ ಗಳಿಸಿತು. ಇಟ್ಟಿರ ತಂಡ ಕೊಕ್ಕೆಂಗಡ ತಂಡಕ್ಕೆ 87 ರನ್ ಗುರಿ ನೀಡಿತು. ಗುರಿ ಬೆನ್ನತ್ತಿದ ಇಟ್ಟೀರ ತಂಡ 3 ವಿಕೆಟ್ ಕಳೆದುಕೊಂಡು 88 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಕುಂದ್ರಂಡ ತಂಡ ನಾಗಂಡ ತಂಡ 7 ವಿಕೆಟ್‌ಗಳಿಂದ ಮಣಿಸಿತು. ಬೋಳಂದಂಡ ತಂಡ ಐಚೋಡಿಯಂಡ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಮಂಡಂಗಡ ತಂಡ ಬಾಚಮಾಡ ತಂಡವನ್ನು 120 ರನ್‌ಗಳ ಭಾರಿ ಅಂತರದಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಮಂಡಂಗಡ ತಂಡ ನಿಗದಿತ 8 ಓವರ್‌ಗಳಲ್ಲಿ 172 ರನ್ ಗಳಿಸಿತು. ಬಳಿಕ ಗೆಲುವಿನ ಗುರಿ
ಬೆನ್ನತ್ತಿದ ಬಾಚಮಾಡ ತಂಡ ಕೇವಲ 48 ರನ್ ಗಳಿಸಲು ಶಕ್ತವಾಯಿತು.
ಸೋಮವಾರ ಶಾಲೆಯ ಮೈದಾನದಲ್ಲಿ ಗ್ರಾಮದ ದೇವತೆಯ ಉತ್ಸವ ನಡೆಯುವುದರಿಂದ ಯಾವುದೇ ಕ್ರಿಕೆಟ್ ಪಂದ್ಯ ನಡೆಯುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.