ಪ್ರಜಾವಾಣಿ ವಾರ್ತೆ
ಗೋಣಿಕೊಪ್ಪಲು: ಕೊಡವ ವಾಲಗತಾಟ್ ಕೊಡವರ ಮತ್ತು ಕೊಡಗಿನ ಸಂಸ್ಕೃತಿಯ ಅಂಗವಾಗಿದ್ದು, ಕೊಡವರ ಜನಪದ ನೃತ್ಯದ ಮೂಲ ಬೇರಾಗಿದೆ ಎಂದು ಕೊಡವ ಜಾನಪದ ತಜ್ಞ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ ಮಂಗಳವಾರ ಹೇಳಿದರು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಕೊಡವ ಜಾನಪದ ಕಲೆ ವಾಲಗತಾಟ್ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ಕೊಡಗಿನ ಸಂಸ್ಕೃತಿ ಉಳಿಸುವ ದೃಷ್ಟಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ವಾಲಗತಾಟ್ ತರಬೇತಿ ಅನಿವಾರ್ಯವಾಗಿದೆ. ಮುಂದಿನ ಪೀಳಿಗೆಗೆ ಇದು ಅನುಕೂಲವಾಗುತ್ತದೆ ಎಂದು ಹೇಳಿದರು.
ತರಬೇತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 120 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದರು.
ತರಬೇತಿದಾರರಾಗಿ ಮುಲ್ಲೇಂಗಡ ಮಾದೋಶ್ ಪೂವಯ್ಯ, ಮಾಚಿಮಾಡ ಡಾಲಿ ಮಂದಣ್ಣ, ಮೂಕಳೇರ ರಮೇಶ್,
ಕೊಣಿಯಂಡ ಮಾದಯ್ಯ, ಗುಮ್ಮಟ್ಟಿರ ಕೌಶಿಕ್, ಕುಲ್ಲಚಂಡ ವಿನುತ ಕೇಸರಿ, ಸುಳ್ಳಿಮಾಡ ಶಿಲ್ಪಾ, ಮಚ್ಚಮಾಡ ಕವಿತಾ ಭಾಗವಹಿಸಿದ್ದರು.
ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕೋಟೇರ ಕಿಶನ್ ಉತ್ತಪ್ಪ, ಸಹ ಕಾರ್ಯದರ್ಶಿ ಆಲೇಮಾಡ ಸುಧೀರ್, ನಿರ್ದೇಶಕರಾದ ಕಳ್ಳಿಚಂಡ ಚಿಪ್ಪ ದೇವಯ್ಯ, ಚೀರಂಡ ಕಂದ ಸುಬ್ಬಯ್ಯ, ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಮುಕಳೇರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಗಂಗಮ್ಮ ಅಲ್ಲದೆ ವಿವಿಧ ಶಾಲೆಯ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.