ADVERTISEMENT

ನಾಪೋಕ್ಲು: ಶಾಲಾ ಮೈದಾನದಲ್ಲಿ ವೈದ್ಯಕೀಯ ಸಾಮಗ್ರಿ ಪತ್ತೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 14:34 IST
Last Updated 5 ಮೇ 2025, 14:34 IST
ನಾಪೋಕ್ಲು ಬಳಿಯ ಕೆಪಿಎಸ್ ಶಾಲಾ ಮೈದಾನ ಹಾಗೂ ಶೌಚಾಲಯದ ಬಳಿ ಶಾಲೆಯ ಪ್ರಯೋಗಾಲಯದ ವಸ್ತುಗಳು, ವೈದ್ಯಕೀಯ ಸಾಮಗ್ರಿಗಳು ಪತ್ತೆಯಾಗಿವೆ
ನಾಪೋಕ್ಲು ಬಳಿಯ ಕೆಪಿಎಸ್ ಶಾಲಾ ಮೈದಾನ ಹಾಗೂ ಶೌಚಾಲಯದ ಬಳಿ ಶಾಲೆಯ ಪ್ರಯೋಗಾಲಯದ ವಸ್ತುಗಳು, ವೈದ್ಯಕೀಯ ಸಾಮಗ್ರಿಗಳು ಪತ್ತೆಯಾಗಿವೆ   

ನಾಪೋಕ್ಲು: ಇಲ್ಲಿನ ಕೆಪಿಎಸ್ ಶಾಲಾ ಮೈದಾನದಲ್ಲಿ ಹಾಗೂ ಶೌಚಾಲಯದ ಬಳಿ ಶಾಲೆಯ ಪ್ರಯೋಗಾಲಯದ ವಸ್ತುಗಳು ಸೇರಿದಂತೆ ವೈದ್ಯಕೀಯ ಸಾಮಗ್ರಿಗಳು ಪತ್ತೆಯಾಗಿವೆ.

ಈ ವಸ್ತುಗಳನ್ನು ಬಳಸಿ ಅಸ್ಸಾಂನ ಕಾರ್ಮಿಕರ ಮಕ್ಕಳು ಆಟವಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಶಾಲೆ ಹಾಗೂ ಆಸ್ಪತ್ರೆಯಿಂದ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರಾದ ನಾಟೋಳಂಡ ಸಚಿನ್ ಪ್ರತಿಕ್ರಿಯಿಸಿ, ‘ಶಾಲೆಯ ಪ್ರಯೋಗಾಲಯ ಹಾಗೂ ಆಸ್ಪತ್ರೆಗಳಿಂದ ಸಾಮಗ್ರಿಗಳು ಇಲ್ಲಿ ಬಂದುದಾದರೂ ಹೇಗೆ ಎಂಬುದನ್ನು ಪತ್ತೆ ಹಚ್ಚಬೇಕಿದೆ’ ಎಂದರು.

ADVERTISEMENT

‘ನಾಪೋಕ್ಲು ಪಟ್ಟಣದಿಂದ ಹಳೆಯ ತಾಲ್ಲೂಕುವರೆಗೆ ಪ್ರತಿನಿತ್ಯ ಕಳ್ಳತನದ ಪ್ರಕರಣಗಳು ವರದಿಯಾಗುತ್ತಿವೆ. ಇಲ್ಲಿನ ಪೆಟ್ರೋಲ್ ಬಂಕ್ ಎದುರು ವಾಸವಿದ್ದ ಕಾರ್ಮಿಕರ ಜೇಬಿನಿಂದ ಮೊಬೈಲ್ ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ. ಪದೇ ಪದೇ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.