ವಿರಾಜಪೇಟೆ: ಪೆರಂಬಾಡಿಯಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿಂದೆ ಉಂಟಾದ ಬೆಂಕಿ ಅವಘಡದ ಸಂದರ್ಭ ಬಹಳಷ್ಟು ಸಮಸ್ಯೆ ಆಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸರ್ಕಾರದಿಂದ ವಿಶೇಷ ಅನುದಾನ ಪಡೆದು ಕಸ ವಿಲೇರಿವಾರಿ ಘಟಕದಲ್ಲಿ ಅಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಸಿ ಕಸವನ್ನು ಬೇರ್ಪಡಿಸುವ ಯಂತ್ರವನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿದೆ ಎಂದು ಪೊನ್ನಣ್ಣ ಹೇಳಿದರು.
‘ ಕಸವನ್ನು ಮೂರು ಹಂತಗಳಲ್ಲಿ ಕಸವನ್ನು ಬೇರ್ಪಡಿಸಲಾಗುತ್ತದೆ. ಸಾರ್ವಜನಿಕರು ಮನೆಯಲ್ಲಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಪುರಸಭೆಯ ಕಸದ ವಾಹನಕ್ಕೆ ನೀಡಬೇಕು. ರಸ್ತೆ ಬದಿಗಳಲ್ಲಿ ಕಸ ಹಾಕುವುದನ್ನು ನಿಲ್ಲಿಸಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷೆ ಎಂ.ಕೆ. ದೇಚಮ್ಮ ಮಾತನಾಡಿ, ‘ಶಾಸಕರ ವಿಶೇಷ ಅನುದಾನದಿಂದ ವಿರಾಜಪೇಟೆ ಕಸ ವಿಲೇವಾರಿ ಘಟಕದಲ್ಲಿ ಅಧುನಿಕ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಕಸ ವಿಲೇವಾರಿ ಸಮಸ್ಯೆ ಕಡಿಮೆಯಾಗಲಿದೆ’ ಎಂದರು.
ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ, ಉಪಾಧ್ಯಕ್ಷೆ ಫಸಿಹಾ ತಬಸುಂ, ಸದಸ್ಯರಾದ ರಂಜಿ ಪೂಣಚ್ಚ, ಜಲೀಲ್, ರಜನಿಕಾಂತ್, ರಾಜೇಶ್ ಪದ್ಮನಾಭ, ಪೂರ್ಣಿಮಾ, ಎಸ್.ಎಚ್. ಮತ್ತಿನ್, ಆಗಸ್ಟೀನ್ ಬೆನ್ನಿ, ಅನಿತಾ, ಹಮ್ಮಿದ್, ಶಬರೀಶ್ ಶೆಟ್ಟಿ, ಆತೀಫ್ ಮನ್ನ, ದಿನೇಶ್ ಪುರಸಭೆಯ ಸಿಬ್ಬಂದಿ, ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ಕೆ. ಪ್ರಮೋದ್, ಅಧ್ಯಕ್ಷೆ ಫಾತಿಮಾ, ಉಪಾಧ್ಯಕ್ಷೆ ಕವಿತ, ಸದಸ್ಯರಾದ ಜೋಸೆಫ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.