ADVERTISEMENT

ಮಡಿಕೇರಿ ತಾಲ್ಲೂಕಿನ ಚೆಂಬುವಿನಲ್ಲಿ 19 ಸೆಂ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 6:21 IST
Last Updated 2 ಜುಲೈ 2022, 6:21 IST
   

ಮಡಿಕೇರಿ: ಮಡಿಕೇರಿ ತಾಲ್ಲೂಕಿನಲ್ಲಿ ಶನಿವಾರ ನಸುಕಿನಲ್ಲಿ ಭಾರಿ ಮಳೆ ಸುರಿದಿದೆ. ಚೆಂಬು ಹಾಗೂ ಅದರ ಸುತ್ತಮುತ್ತಲ ಗ್ರಾಮಗಳಲ್ಲಿ 19 ಸೆಂ.ಮೀನಷ್ಟು ಮಳೆ ಬಿದ್ದಿದೆ. ಸಂಪಾಜೆಯಲ್ಲಿ 14 ಸೆಂ.ಮೀ ಮಳೆಯಾಗಿದೆ.

ಇದರಿಂದ ಪಯಸ್ವಿನಿ ನದಿ ತುಂಬಿ ಹರಿಯುತ್ತಿದೆ. ಹಳ್ಳ, ಕೊಳ್ಳಗಳೆಲ್ಲ ಭರ್ತಿಯಾಗಿವೆ. ಸಂಪಾಜೆ ಗ್ರಾಮದ ಕೆಲವೆಡೆ ಬರೆ ಕುಸಿತ ಉಂಟಾಗಿದೆ. ಅಚ್ಯುತ ಎಂಬುವವರ ಮನೆಯ ಹಿಂಭಾಗದಲ್ಲಿ ಬರೆ ಕುಸಿತವಾಗಿದೆ. ಗೂನಡ್ಕದ ಗಣೇಶ್‌ಭಟ್ ಅವರ ಮನೆಗೆ ಹಾನಿಯಾಗಿದೆ. ಕೆಲವು ಮನೆಗಳಿಗೆ ನೀರು ನುಗ್ಗಿದೆ. ಹಲವು ತೋಟಗಳು ಜಲಾವೃತವಾಗಿವೆ.

ಗಾಳಿಬೀಡಿನಲ್ಲಿ 16 ಸೆಂ.ಮೀ, ಪೆರಾಜೆಯಲ್ಲಿ 15 ಸೆಂ.ಮೀ, ಭಾಗಮಂಡಲ 10, ಬೆಲ್ಲಮಾವಟಿಯಲ್ಲಿ 8, ಮಡಿಕೇರಿ ನಗರದಲ್ಲಿ 8 ಸೆಂ.ಮೀನಷ್ಟು ಮಳೆ ಕೆಲವೇ ಗಂಟೆಗಳಲ್ಲಿ ಸುರಿದಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.