ADVERTISEMENT

ಕ್ರೀಡಾ ಸಾಧನೆಗೆ ಅವಕಾಶ: ಪೊನ್ನಣ್ಣ

ಜೇನುಕುರುಬ ಯುವ ಸಮುದಾಯದ ಕ್ರಿಕೆಟ್ ಟೂರ್ನಿ:

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 15:30 IST
Last Updated 30 ಏಪ್ರಿಲ್ 2025, 15:30 IST
ಗೋಣಿಕೊಪ್ಪಲು ಬಳಿಯ ತಿತಿಮತಿಯಲ್ಲಿ ನವ ಜೇನುಕುರುಬ ಕ್ರಿಕೆಟ್ ಟೂರ್ನಿಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ  ಆಟಗಾರರಿಗೆ ಶುಭಕೋರಿದರು
ಗೋಣಿಕೊಪ್ಪಲು ಬಳಿಯ ತಿತಿಮತಿಯಲ್ಲಿ ನವ ಜೇನುಕುರುಬ ಕ್ರಿಕೆಟ್ ಟೂರ್ನಿಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ  ಆಟಗಾರರಿಗೆ ಶುಭಕೋರಿದರು   

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ತಿತಿಮತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಜೇನು ಕುರುಬ ಯುವ ಸಮಾಜ ಆಯೋಜಿಸಿರುವ ಗೆಜ್ಜೆಮನೆ ಕ್ರಿಕೆಟ್ ಟೂರ್ನಿಯಲ್ಲಿ ಶಾಸಕ ಎ.ಎಸ್ ಪೊನ್ನಣ್ಣ  ಟೂರ್ನಿಗೆಚಾಲನೆ ನೀಡಿದರು.

‘ಜೇನು ಕುರುಬ ಸಮುದಾಯದಲ್ಲಿ ಉತ್ತಮ ಆಟಗಾರರಿದ್ದಾರೆ. ತಮ್ಮ ಪ್ರತಿಭೆಯನ್ನು ಕ್ರೀಡಾ ಜಗತ್ತಿಗೆ ಪರಿಚಯಿಸಲು ಇದೊಂದು ಉತ್ತಮ ಅವಕಾಶವಾಗಿದೆ’ ಎಂದರು. ಸಮುದಾಯದ ಕ್ರೀಡಾ ಪ್ರತಿಭೆಗಳ ಏಳಿಗೆಗೆ ಸಹಾಯ ಮಾಡಲು  ಸದಾ ಸಿದ್ಧ ಎಂದರು.

  ಶಾಸಕರನ್ನು ಸನ್ಮಾನಿಸಲಾಯಿತು. ಬುಡಕಟ್ಟು ಸಮುದಾಯದ ಮುಖಂಡರಾದ ಜೆ.ಆರ್.ಪಂಕಜಾ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.