ಸುಂಟಿಕೊಪ್ಪ: ಇಲ್ಲಿನ ಮಲಯಾಳಿ ಸಮಾಜದ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಆರ್. ರಮೇಶ್ ಪಿಳ್ಳೆ ಆಯ್ಕೆಯಾಗಿದ್ದಾರೆ.
ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಮಾಜದ ಅಧ್ಯಕ್ಷ ಎಂ.ಆರ್.ಶಶಿ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್.ಅನಿಲ್ ಕುಮಾರ್, ಉಪಾಧ್ಯಕ್ಷರಾಗಿ ವಾಸುದೇವ, ಟಿ.ಕೆ.ಹರೀಶ್, ಖಜಾಂಚಿಯಾಗಿ ಕೆ.ಅನೀಶ್, ಸಹ ಕಾರ್ಯದರ್ಶಿಗಳಾಗಿ ಗಿರೀಶ್ ಮತ್ತು ಜಿ.ಪಿ. ಅನಿಲ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ಕೆ. ರಾಜೇಶ್ ಮತ್ತು ವಿ.ಕೆ. ರಾಜು, ಕ್ರೀಡಾ ಕಾರ್ಯದರ್ಶಿಗಳಾಗಿ ಪಿ.ಸಿ. ಸುರೇಶ್ ಮತ್ತು ಪಿ.ಆರ್.ಬಿಜು, ಗೌರವ ಅಧ್ಯಕ್ಷರಾಗಿ ಭಾಸ್ಕರನ್ ಮತ್ತು ವೇಲಾಯುಧನ್ ಹಾಗೂ ಆರು ಮಂದಿ ಸಲಹಾ ಸಮಿತಿ ಸದಸ್ಯರು ಮತ್ತು ಎಂಟು ಮಂದಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಯಿತು. ಮಹಾಸಭೆಯಲ್ಲಿ ಕಳೆದ ಬಾರಿಯ ಲೆಕ್ಕಪತ್ರ ಮಂಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.