ADVERTISEMENT

ನಾಪೊಕ್ಲು ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 14:33 IST
Last Updated 1 ಏಪ್ರಿಲ್ 2019, 14:33 IST
ನಾಪೋಕ್ಲು ವ್ಯಾಪ್ತಿಯಲ್ಲಿ ಸೋಮವಾರ ಆಲಿಕಲ್ಲು ಬಿದ್ದಿರುವುದು
ನಾಪೋಕ್ಲು ವ್ಯಾಪ್ತಿಯಲ್ಲಿ ಸೋಮವಾರ ಆಲಿಕಲ್ಲು ಬಿದ್ದಿರುವುದು   

ನಾಪೋಕ್ಲು: ಪಟ್ಟಣ ವ್ಯಾಪ್ತಿಯಲ್ಲಿ ಸೋಮವಾರ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಮಧ್ಯಾಹ್ನ 2.30ರಿಂದ ಹೋಬಳಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಮುಕ್ಕಾಲು ಗಂಟೆ ಕಾಲ ಮಳೆ ಸುರಿಯಿತು.

ಪಟ್ಟಣ ಸೇರಿದಂತೆ ಬಲಮುರಿ, ಪಾರಾಣೆ, ಕೈಕಾಡು, ಬೇತು ಭಾಗಗಳಲ್ಲಿ 25 ಮಿ.ಮೀ ಮಳೆ ಸುರಿದಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಈ ಭಾಗದ ಕಾಫಿ ಬೆಳೆಗಾರರು ಹರ್ಷಗೊಂಡಿದ್ದಾರೆ.

ಆಲಿಕಲ್ಲು ಮಳೆ:

ADVERTISEMENT

ಬೇಲೂರು ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆ ಸುರಿಯಿತು. ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ತಂಪಿನ ಅನುಭವವಾಯಿತು.

ಮಧ್ಯಾಹ್ನ 1.45ರ ವೇಳೆಗೆ ಆರಂಭಗೊಂಡ ಮಳೆ 2.20ರ ವರೆಗೆ ಸುರಿಯಿತು. ಗಾಳಿ ಸಹಿತ ಮಳೆ ಬಿತ್ತು. ಮಳೆ ಮುನ್ಸೂಚನೆ ಇಲ್ಲದ ಕಾರಣ ಜನರು ನೆನೆದು ಮನೆ ಸೇರಿದರು. ಇದು, ರೇವತಿ ಮಳೆಯಾಗಿದ್ದು, ಭೂಮಿ ತಂಪಾಗಿ ಬೆಳೆ ಚೆನ್ನಾಗಿ ಆಗುತ್ತದೆ ಎಂಬ ಭಾವನೆ ರೈತರಲ್ಲಿದೆ.

ಹೊಳೆನರಸೀಪುರದಲ್ಲೂ ಮಳೆ:

ಹೊಳೆನರಸೀಪುರ ಪಟ್ಟಣದಲ್ಲಿ ಸೋಮವಾರ ಸಂಜೆ ಅರ್ಧ ಗಂಟೆ ಧಾರಾಕಾರ ಮಳೆ ಸುರಿಯಿತು. ಸಂಜೆ 5ರ ಸಮಯದಲ್ಲಿ ಗುಡುಗು ಸಹಿತ ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.