ಗೋಣಿಕೊಪ್ಪಲು: ಜಿಲ್ಲೆ ಕೊಡವ ಸಮಾಜದ ಪ್ರಮುಖರು ಗುರುವಾರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಬೆಂಗಳೂರು ವಿಧಾನ ಸೌಧ ಕಚೇರಿಯಲ್ಲಿ ಭೇಟಿ ಮಾಡಿ ಕೊಡವ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ರವರ ನೇತೃತ್ವದಲ್ಲಿ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಬಾನಂಡ ಪೃತ್ಯು ರ ಅವರೊಂದಿಗೆ, ಕೋಯವ ಸಮಾಜದ ಅಧ್ಯಕ್ಷ ಜೆ.ಸಿ ಮಾದಪ್ಪ, ಕಾರ್ಯದರ್ಶಿ ಟಿ.ಜಿ.ಕಾರ್ಯಪ್ಪ, ನಿರ್ದೇಶರಾದ ಎಂ.ಜಿ ಮಹೇಶ್, ಎಂ.ಪೂಣಚ್ಚ, ಕೆ.ಎನ್.ಸುಬ್ಬಯ್ಯ ಮೊದಲಾದವರು ಪಾಲ್ಗೊಂಡಿದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಪೊನ್ನಣ್ಣ ಆದ್ಯತೆಯ ಮೇರೆಗೆ ಅಗತ್ಯಕ್ಕನುಸಾರ ಅನುದಾನ ನೀಡುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.