ಮಡಿಕೇರಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕೊಡಗು ಘಟಕದ ಸಭಾಪತಿಯಾಗಿ ಬಿ.ಕೆ.ರವೀಂದ್ರ ರೈ 3ನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.
ನಗರದ ರೆಡ್‌ಕ್ರಾಸ್ ಭವನದಲ್ಲಿ ಜರುಗಿದ ವಾರ್ಷಿಕ ಮಹಾಸಭೆ ವೇಳೆ ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಆಯ್ಕೆ ಜರುಗಿತು.
ಈ ವೇಳೆ ಸಭಾಪತಿಯಾಗಿ ಬಿ.ಕೆ.ರವೀಂದ್ರರೈ, ಉಪಸಭಾಪತಿಯಾಗಿ ಎಚ್.ಟಿ.ಅನಿಲ್, ಕಾರ್ಯದರ್ಶಿಯಾಗಿ ಎಂ.ಧನಂಜಯ, ಖಜಾಂಚಿಯಾಗಿ ಪ್ರಸಾದ್ ಗೌಡ, ಸಹಕಾರ್ಯದರ್ಶಿಯಾಗಿ ಕೆ.ಮಧುಕರ್ ಆಯ್ಕೆಯಾಗಿದ್ದಾರೆ.
ರೆಡ್‌ಕ್ರಾಸ್ ನಿರ್ದೇಶಕರಾಗಿ ಧೀರ್ಘಕೇಶಿ ಶಿವಣ್ಣ, ಡಾ.ಸಿ.ಆರ್.ಪ್ರಶಾಂತ್, ಎಚ್.ಆರ್.ಮುರಳೀಧರ್, ಪಿ.ಆರ್.ರಾಜೇಶ್, ಕೆ.ಎಂ.ವೆಂಕಟೇಶ್, ಬಿ.ಎನ್.ಪ್ರಕಾಶ್, ಎಸ್.ಸಿ.ಸತೀಶ್, ಜೊಸೇಫ್ ಸ್ಯಾಮ್, ಎ.ಕೆ.ಜೀವನ್, ಬಿ.ಕೆ.ಸತೀಶ್ ರೈ, ಬಿ.ಎನ್. ಧನಂಜಯ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ವಸಂತಕುಮಾರ್, ತೆನ್ನೀರಾಮೈನಾ, ಕೆ.ಸಿ.ವಸಂತ, ಕೆ.ಟಿ.ಉತ್ತಯ್ಯ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಧಾರವಾಡದಿಂದ ಆಗಮಿಸಿದ್ದ ಕರ್ನಾಟಕ ರಾಜ್ಯ ರೆಡ್‌ಕ್ರಾಸ್ ನಿರ್ದೇಶಕ ಮಹಂತೇಶ್ ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.