ನಾಪೋಕ್ಲು: 79ನೇ ಸ್ವಾತಂತ್ರ್ಯಮಹೋತ್ಸವದ ಪ್ರಯುಕ್ತ ಇಲ್ಲಿನ ಅಂಕುರ್ ಪಬ್ಲಿಕ್ ಶಾಲೆಯಲ್ಲಿ ನಾಪೋಕ್ಲು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಏಕತೆಗಾಗಿ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಮ್ಯಾರಥಾನ್ ಓಟವು ಕೊಟ್ಟಮುಡಿಯಿಂದ ಹಳೆ ತಾಲ್ಲೂಕು ಭಗವತಿ ದೇವಸ್ಥಾನದವರೆಗೆ ಜರುಗಿತು.
ಮುಫಿದ ಅಂಕರ್ ಪಬ್ಲಿಕ್ ಶಾಲೆ ಪ್ರಥಮ: ಏಕತೆಗಾಗಿ ಓಟ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಮುಫಿದ ಅಂಕರ್ ಪಬ್ಲಿಕ್ ಶಾಲೆ ಪ್ರಥಮ ಸ್ಥಾನ, ಶೀಖ ಮುತ್ತಮ್ಮ ಅಂಕಲ್ ಶಾಲೆ ದ್ವಿತೀಯ ಸ್ಥಾನ, ರಿಚ್ಚ ಪೂಣಚ್ಚ ಅಂಕುರ್ ಪಬ್ಲಿಕ್ ಶಾಲೆ ತೃತೀಯ ಸ್ಥಾನ ಪಡೆದರು.
ಫಾತಿಮಾ ನೌಶಿಬ ಕೆಪಿಎಸ್ 4ನೇ ಸ್ಥಾನ, ವಿಂಪಲ್ ದೆಚಮ್ಮ ಅಂಕುರ್ ಪಬ್ಲಿಕ್ ಶಾಲೆ 5ನೇ ಸ್ಥಾನ, ಗಾನವಿ ಶ್ರೀ ರಾಮ ಟ್ರಸ್ಟ್ 6ನೇ ಸ್ಥಾನ, ರಿಫಾನ ಕೆಪಿಎಸ್ ಶಾಲೆ 7ನೇ ಸ್ಥಾನ, ಫಾತಿಮಾ ಸಫಾನ ಕೆಪಿಎಸ್ ಶಾಲೆ 8ನೇ ಸ್ಥಾನ, ಜೋಶ್ನ ಕಾವೇರಮ್ಮ ಅಂಕುರ್ ಪಬ್ಲಿಕ್ ಶಾಲೆ 9ನೇ ಸ್ಥಾನ, ತೀರ್ಥ ಅಂಕುರ್ ಪಬ್ಲಿಕ್ ಶಾಲೆ 10ನೇ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ನೀಡಿ ಗೌರವಿಸಿದರು.
ಇದಕ್ಕೂ ಮೊದಲು ಪೊಲೀಸ್ ಠಾಣೆಯ ಎಎಸ್ಐ ಫ್ರಾನ್ಸಿಸ್ ಹಾಗೂ ಶಾಲೆಯ ಕಾರ್ಯದರ್ಶಿ ರತ್ನ ಚರ್ಮಣ ಏಕತೆಗಾಗಿ ಓಟದ ಸ್ಪರ್ಧೆ ಉದ್ಘಾಟಿಸಿದರು. ನಂತರ ಶಾಲೆಯಲ್ಲಿ ನಡೆದ ಸಮಾರಂಭಕ್ಕೆ ಶಾಲೆಯ ಅಧ್ಯಕ್ಷ ಕೇಟೋಳಿರ ರಾಜ ಚರ್ಮಣ ಹಾಗೂ ಸಮುದಾಯ ಆರೋಗ್ಯ ಕೇಂದ್ರದಂತ ವೈದ್ಯಾಧಿಕಾರಿ ನೂರ್ ಫಾತಿಮಾ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.