ADVERTISEMENT

‘ಭೂಕಂಪನ ಮಾಪನ ಉಪಕೇಂದ್ರ’ ಸ್ಥಾಪನೆ

ಭೂಮಿಯೊಳಗಿನ ಸೂಕ್ಷ್ಮ ಕಂಪನ ಅಧ್ಯಯನಕ್ಕೆ ಸಹಕಾರಿ, ವಿಜ್ಞಾನಿಗಳ ತಂಡದಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:17 IST
Last Updated 1 ಜುಲೈ 2022, 2:17 IST
ಚೆಂಬು ಗ್ರಾಮದಲ್ಲಿ ‘ಭೂಕಂಪನ ಮಾಪನ ಉಪಕೇಂದ್ರ’ ಸ್ಥಾಪನೆ ಮಾಡಿದ ವಿಜ್ಞಾನಿಗಳ ತಂಡ (ಎಡಚಿತ್ರ) ಚೆಂಬು ಗ್ರಾಮದಲ್ಲಿನ ‘ಭೂಕಂಪನ ಮಾಪನ ಉಪಕೇಂದ್ರ’ದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಉಪಕರಣಗಳು
ಚೆಂಬು ಗ್ರಾಮದಲ್ಲಿ ‘ಭೂಕಂಪನ ಮಾಪನ ಉಪಕೇಂದ್ರ’ ಸ್ಥಾಪನೆ ಮಾಡಿದ ವಿಜ್ಞಾನಿಗಳ ತಂಡ (ಎಡಚಿತ್ರ) ಚೆಂಬು ಗ್ರಾಮದಲ್ಲಿನ ‘ಭೂಕಂಪನ ಮಾಪನ ಉಪಕೇಂದ್ರ’ದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಉಪಕರಣಗಳು   

ಮಡಿಕೇರಿ: ಜಿಲ್ಲೆಯ ಚೆಂಬು ಗ್ರಾಮದ ಸರ್ಕಾರಿ ಪ್ರೌಢಶಾಲೆ ಬಳಿ ತಾತ್ಕಾಲಿಕವಾಗಿ ‘ಭೂಕಂಪನ ಮಾಪನ ಉಪಕೇಂದ್ರ’ ಸ್ಥಾಪಿಸಲಾಗಿದೆ.

ಈಚೆಗೆ ಕರಿಕೆ ಮತ್ತು ಚೆಂಬು ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕಂಪನ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಭೂವಿಜ್ಞಾನಿಗಳ ತಂಡವು ಅಧ್ಯಯನಕ್ಕಾಗಿ ಈ ಕೇಂದ್ರವನ್ನು ಆರಂಭಿಸಿದೆ.

ಬ್ರಾಡ್‌ಬ್ಯಾಂಡ್ ಸೆಸ್ಮೊಮೀಟರ್, ಅಕೆಲೆರ್‌ಮೀಟರ್, ಡಿಜಿಟರ್, ಜಿಪಿಎಸ್‌ ಮತ್ತಿತ್ತರ ಉಪಕರಣಗಳನ್ನು ಅಳವಡಿಸಲಾಗಿದ್ದು, ಭೂಮಿಯೊಳಗಿನ ಸೂಕ್ಷ್ಮ ಕಂಪನಗಳನ್ನೂ ಇದರಿಂದ ಅಧ್ಯಯನ ಮಾಡಬಹುದಾಗಿದೆ.

ADVERTISEMENT

ಭೂಕಂಪನ ಸಂಭವಿಸಿದ್ದಲ್ಲಿ ಭೂಕಂಪನ ಮಾಪನ ಉಪಕರಣ ರಿಕ್ಟರ್ ಮಾಪಕದಲ್ಲಿ ದಾಖಲಾಗುತ್ತದೆ. ತಾತ್ಕಾಲಿಕವಾಗಿ ಅಳವಡಿಸಿರುವ ಭೂಕಂಪನ ಮಾಪನ ಉಪಕರಣದಿಂದ ಭೂಕಂಪನ ಸಂಬಂಧಿಸಿದಂತೆ ಸವಿಸ್ತಾರವಾಗಿ ಕಾಲ ಕಾಲಕ್ಕೆ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ.ರಮೇಶ್ ತಿಳಿಸಿದ್ದಾರೆ.

2018 ರಲ್ಲಿ ಭೂಮಿ ಬಿರುಕು ಬಿಟ್ಟಿದ್ದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಲಾಗಿದ್ದು, ಈ ಭಾಗದಲ್ಲಿ ಈ ಬಾರಿ ಭೂಮಿ ಬಿರುಕು ಬಿಟ್ಟಿಲ್ಲ ಎಂದು ಅವರು ಹೇಳಿದ್ದಾರೆ. ‘ಭೂಕಂಪನ ಸಂಭವಿಸಿದ್ದಲ್ಲಿ ಸಾರ್ವಜನಿಕರು ಗಾಬರಿಯಾಗದೆ ಮನೆ ಯಿಂದ ಹೊರಬರಬೇಕು, ವಿದ್ಯುತ್ ಮತ್ತು ಅಡುಗೆ ಅನಿಲ ಕಡಿತಗೊಳಿ ಸಬೇಕು (ಆಫ್ ಮಾಡುವುದು), ಕಟ್ಟಡದ ಚಾವಣಿಯಲ್ಲಿ ಹೆಚ್ಚಿನ ಭಾರ ಇರದಂತೆ ಗಮನಹರಿಸಬೇಕು, ಇಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಲ್ಲಿ ಅನಾಹುತವನ್ನು ಕಡಿಮೆ ಮಾಡಬಹುದು’ ಎಂದು ಅವರು ಸಲಹೆ ನೀಡಿದ್ದಾರೆ. ಕರಿಕೆ ಮತ್ತು ಚೆಂಬು ಸುತ್ತಮುತ್ತ ಜೂನ್ 25 ರಂದು ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ 2.3, ಜೂನ್ 28ರಂದು ಬೆಳಿಗ್ಗೆ 7.45 ಗಂಟೆಗೆ 3.0, ಹಾಗೆಯೇ ಅಂದು ಸಂಜೆ 4.32 ಗಂಟೆ ವೇಳೆಯಲ್ಲಿ 1.8 ರಿಕ್ಟರ್ ಮಾಪಕದಲ್ಲಿ ಹಾಗೂ ಹಾರಂಗಿ ಜಲಾಶಯದಲ್ಲಿರುವ ಶಾಶ್ವತ ಭೂಕಂಪನ ಮಾಪನ ಕೇಂದ್ರದಲ್ಲಿ ಭೂಕಂಪನ
ದಾಖ ಲಾಗಿತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ.ಜಗದೀಶ್, ಜಿಲ್ಲಾ ವಿಪತ್ತು ಪರಿಣತರಾದ ಅನನ್ಯ ವಾಸುದೇವ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ಭೂವಿಜ್ಞಾನಿ ಲಾಯಲ್ ಇತರರು ಭೂ ವೀಕ್ಷಣಾ
ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.