ಅನಿಲ ಸೋರಿಕೆ
ಸುಂಟಿಕೊಪ್ಪ: ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್‌ಗೆ ಬೆಂಕಿ ಹತ್ತಿದ ಪರಿಣಾಮ ಮಂಗಳವಾರ ರಾತ್ರಿ ದಂಪತಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಸುಂಟಿಕೊಪ್ಪ 1ನೇ ವಿಭಾಗದ ನಿವಾಸಿಗಳಾದ ತಲೆ ಹೊರೆ ಕಾರ್ಮಿಕ ವಿಜಯ, ಅವರ ಪತ್ನಿ ಸಾವಿತ್ರಿ ಮನೆಯ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅನಿಲ ಸೋರಿಕೆಯಾಗಿ ಏಕಾಏಕಿ ಸಿಲಿಂಡರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಪ್ರಯತ್ನಿಸಿದ ವೇಳೆ ಈ ದಂಪತಿಗಳಿಗೆ ಗಾಯವಾಗಿದೆ. ಬೆಂಕಿ ಗಮನಿಸಿದ ಅಕ್ಕಪಕ್ಕದವರು ಸಿಲಿಂಡರ್ ಗಾಬರಿಯಿಂದ ಹೊರ ಹಾಕಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯ ರಫೀಕ್ ಖಾನ್, ಗ್ಯಾಸ್ ಎಜೆನ್ಸಿಯ ವ್ಯವಸ್ಥಾಪಕ ರಾಕೇಶ್ ಮತ್ತು ಅಕ್ಕಪಕ್ಕದವರು ಪ್ರಯತ್ನಿಸಿ ಬೆಂಕಿ ನಂದಿಸಿದರು. ದಂಪತಿಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.