ಗೋಣಿಕೊಪ್ಪಲು: ‘ಹಿರಿಯರನ್ನು ಗೌರವಿಸುವುದು ಮತ್ತು ಅವರಿಗೆ ಅಗತ್ಯವಾದ ಎಲ್ಲ ಸೌಕರ್ಯ ಸವಲತ್ತುಗಳನ್ನು ಕಲ್ಪಿಸುವುದು ಯುವ ತಲೆಮಾರಿನವರ ಕರ್ತವ್ಯವಾಗಿದೆ’ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಹಳೆ ಕಟ್ಟಡದ ಸಭಾಂಗಣದಲ್ಲಿ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ವಿತರಣೆ ಮಾಡಿ ಅವರು ಮಾತನಾಡಿದರು.
‘ಹಿರಿಯರು ಕಟ್ಟಿದ ನಾಡಿನಲ್ಲಿ ಇಂದು ನಾವೆಲ್ಲ ಜೀವಿಸುತ್ತಿದ್ದೇವೆ. ಅವರು ಉಳಿಸಿ ಹೋದ ಈ ಪರಿಸರ ಮತ್ತು ಭಾವೈಕ್ಯದ ಸಮಾಜವನ್ನು ಮತ್ತಷ್ಟು ಗಟ್ಟಿಗೊಳಿಸುವುದು ನಮ್ಮ ಪ್ರಮುಖ ಆದ್ಯತೆ ಆಗಿದೆ. ಹಿರಿಯರನ್ನು ಗೌರವಿಸುವುದು ಯುವ ಜನಾಂಗದ ಜವಾಬ್ದಾರಿಯಾಗಿದೆ. ಈ ಮೂಲಕ ನಾಡಿನ ಎಲ್ಲಾ ಹಿರಿಯ ಜೀವಿಗಳಿಗೆ ನಾವು ನ್ಯಾಯ ಒದಗಿಸಿದಂತೆ ಆಗುತ್ತದೆ’ ಎಂದು ಹೇಳಿದರು.
‘ಸರ್ಕಾರ ಸಹ ನಾಡಿನ ಹಿರಿಯ ನಾಗರಿಕರ ಅನುಕೂಲಕ್ಕೆಂದು ಹಲವಾರು ಸವಲತ್ತುಗಳನ್ನು ನೀಡುತ್ತಿದೆ. ಇದನ್ನು ಎಲ್ಲ ಹಿರಿಯರಿಗೆ ತಲುಪಿಸುವ ಜವಾಬ್ದಾರಿ ಯುಕರ ಮೇಲಿದೆ. ಇದಕ್ಕಾಗಿ ಯುವ ಜನಾಂಗ ಶ್ರಮಿಸಬೇಕು’ ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳಾ, ಗ್ರಾಮ ಪಂಚಾಯಿತಿ ಸದಸ್ಯರಾದ ಅಪ್ಜಲ್, ಶರತ್ ಕಾಂತ್ ಧ್ಯಾನ ಸುಬ್ಬಯ್ಯ, ಪಿಡಿಒ ತಿಮ್ಮಯ್ಯ, ವಿಶೇಷ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕುಮಾರಿ, ಕರ್ನಾಟಕ ಕೊಡುವ ಸಾಹಿತ್ಯ ಅಕಾಡೆಮಿ ಸದಸ್ಯ ಶಿವಾಜಿ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.