ADVERTISEMENT

ವಿರಾಜಪೇಟೆ: ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 13:13 IST
Last Updated 23 ಜೂನ್ 2025, 13:13 IST
ವಿರಾಜಪೇಟೆ ಸಮೀಪದ ಭೇತ್ರಿಯಲ್ಲಿ ಕಾವೇರಿ ಹೊಳೆಯ ಹರಿವಿನಲ್ಲಿ ಸೋಮವಾರ ಗಣನೀಯ ಏರಿಕೆ ಕಂಡುಬಂತು
ವಿರಾಜಪೇಟೆ ಸಮೀಪದ ಭೇತ್ರಿಯಲ್ಲಿ ಕಾವೇರಿ ಹೊಳೆಯ ಹರಿವಿನಲ್ಲಿ ಸೋಮವಾರ ಗಣನೀಯ ಏರಿಕೆ ಕಂಡುಬಂತು   

ವಿರಾಜಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ  ಉತ್ತಮ‌ ಮಳೆಯಾಗಿದೆ. ಭಾನುವಾರ ರಾತ್ರಿಯಿಡಿ ಧಾರಾಕಾರವಾಗಿ ಸುರಿದ ಮಳೆಯು ಸೋಮವಾರ ಬೆಳಿಗ್ಗೆಯು ಮುಂದುವರೆಯಿತು. ಮಧ್ಯಾಹ್ನದ ಸುಮಾರಿಗೆ ಮಳೆಯ ಮಳೆಯ ಬಿರುಸು ಕಡಿಮೆಯಾಯಿತು. ಸಂಜೆ ವೇಳೆಗೆ ಮತ್ತೆ‌ ಮಳೆ‌ ಬಿರುಸು ಪಡೆದುಕೊಂಡಿತು.

ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಸಮೀಪದ ಕದನೂರು ಹೊಳೆ ಹಾಗೂ ಭೇತ್ರಿಯಲ್ಲಿ ಕಾವೇರಿ ಹೊಳೆಯ ಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂತು.
ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಾದ ಕದನೂರು, ಕಾಕೋಟುಪರಂಬು, ಚೆಂಬೆಬೆಳ್ಳೂರು, ಒಂಟಿಯಂಗಡಿ, ಅಮ್ಮತ್ತಿ, ಆರ್ಜಿ, ಬೇಟೋಳಿ ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿ ಉತ್ತಮ‌ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT