ADVERTISEMENT

ವಿರಾಜಪೇಟೆ | ಅಂಬೇಡ್ಕರ್ ಭವನದ ತಡೆಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 21 ಮೇ 2025, 5:52 IST
Last Updated 21 ಮೇ 2025, 5:52 IST
ವಿರಾಜಪೇಟೆ ಪಟ್ಟಣದಲ್ಲಿ‌ ನಿರ್ಮಾಣಗೊಂಡು ಈಚೆಗೆ ಲೋಕಾರ್ಪಣೆಗೊಂಡ ಅಂಬೇಡ್ಕರ್ ಭವನದ ತಡೆಗೋಡೆ ಆರಂಭದ ಮಳೆಗೆ ಕುಸಿತಗೊಂಡಿರುವುದು
ವಿರಾಜಪೇಟೆ ಪಟ್ಟಣದಲ್ಲಿ‌ ನಿರ್ಮಾಣಗೊಂಡು ಈಚೆಗೆ ಲೋಕಾರ್ಪಣೆಗೊಂಡ ಅಂಬೇಡ್ಕರ್ ಭವನದ ತಡೆಗೋಡೆ ಆರಂಭದ ಮಳೆಗೆ ಕುಸಿತಗೊಂಡಿರುವುದು   

ವಿರಾಜಪೇಟೆ: ಪಟ್ಟಣದಲ್ಲಿ‌ ಹೊಸದಾಗಿ ನಿರ್ಮಿಸಿ ಈಚೆಗೆ ಲೋಕಾರ್ಪಣೆಗೊಂಡ ಅಂಬೇಡ್ಕರ್ ಭವನದ ತಡೆಗೋಡೆ ಕುಸಿತಗೊಂಡಿದೆ.

10 ವರ್ಷಗಳ ಹಿಂದೆ ಆರಂಭಗೊಂಡ ಕಾಮಗಾರಿಯು ಕೆಲವು ಸಣ್ಣಪುಟ್ಟ ಕೆಲಸಗಳು ಉಳಿಕೆಯಾಗಿದ್ದವು. ಬಳಿಕ  ಕೆಲ ದಿನಗಳ ಹಿಂದೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಂಡಿತ್ತು.

 ಹೊಸ ಕಟ್ಟಡ ಲೋಕಾರ್ಪಣೆಯ ಕೆಲವು ದಿನಗಳಲ್ಲೇ ತಡೆಗೋಡೆ ಕುಸಿದಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಹಾಗೂ ಕಾಮಗಾರಿಯ ಗುಣಮಟ್ಟದ ಕುರಿತು ಅನುಮಾನ‌ ವ್ಯಕ್ತಗೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.