ADVERTISEMENT

ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 7:25 IST
Last Updated 22 ಮೇ 2025, 7:25 IST
ವಿರಾಜಪೇಟೆ ತಾಲ್ಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್‌ನಿಂದ 'ನಮ್ಮೂರು ನಮ್ಮ ಕೆರೆ' ಕಾರ್ಯಕ್ರಮದಡಿ ಹುದಿಕೇರಿಯ  ಮಹಾದೇವರ ಪೆಗ್ಗೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಈಚೆಗೆ ನಡೆಸಲಾಯಿತು
ವಿರಾಜಪೇಟೆ ತಾಲ್ಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್‌ನಿಂದ 'ನಮ್ಮೂರು ನಮ್ಮ ಕೆರೆ' ಕಾರ್ಯಕ್ರಮದಡಿ ಹುದಿಕೇರಿಯ  ಮಹಾದೇವರ ಪೆಗ್ಗೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಈಚೆಗೆ ನಡೆಸಲಾಯಿತು   

ವಿರಾಜಪೇಟೆ: ವಿರಾಜಪೇಟೆ ತಾಲ್ಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್‌ನಿಂದ 'ನಮ್ಮೂರು ನಮ್ಮ ಕೆರೆ' ಕಾರ್ಯಕ್ರಮದಡಿ ಹುದಿಕೇರಿಯ ಶ್ರೀಮಹಾದೇವರ ಪೆಗ್ಗೆರೆ ಕೆರೆ ಅಭಿವೃದ್ಧಿ ಕಾಮಗಾರಿಗೆ  ಈಚೆಗೆ ಚಾಲನೆ ನೀಡಲಾಯಿತು.

 ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿವ್ಯ ಕಾವೇರಮ್ಮ ಮಾತನಾಡಿ, ಕೆರೆ ಅಭಿವೃದ್ಧಿಯಿಂದ ಸುತ್ತಲಿನ ಕೃಷಿಕರಿಗೆ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿದೆ. ಜೊತೆಗೆ ಊರಿನ ವಾತಾವರಣ ಸುಂದರವಾಗಿರುತ್ತದೆ ಎಂದರು.

ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಅರುಣ್ ಬಾನಂಗಡ, ತಾಲ್ಲೂಕಿನ ಯೋಜನಾಧಿಕಾರಿ ಹರೀಶ್ ಪಿ., ಮುಖ್ಯ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ರೋಶನ್ ಅಪ್ಪಚ್ಚು, ಕೆರೆ ಸಮಿತಿ ಅಧ್ಯಕ್ಷ ಕರುಂಬಯ್ಯ, ಪಂಚಾಯತಿ ಸದಸ್ಯರಾದ ಶಿಲ್ಪ, ಯೋಜನೆಯ ಶೆಟ್ಟಿಗೇರಿ ಒಕ್ಕೂಟದ ಅಧ್ಯಕ್ಷ ಸುಶೀಲ, ದೇವಸ್ಥಾನದ ಅರ್ಚಕ ಗುರುರಾಜ್, ವಲಯ ಮೇಲ್ವಿಚಾರಕ ನಾಗರಾಜ್, ಕೃಷಿ ಮೇಲ್ವಿಚಾರಕ ವಸಂತ್, ಸೇವಾ ಪ್ರತಿನಿಧಿ ಶಾಲಿನಿ, ಜಾಕೀರ, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು, ಗ್ರಾಮಸ್ಥರು, ಕೆರೆ ಸಮಿತಿಯವರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.