ADVERTISEMENT

ವಾಲಿಬಾಲ್ : ಸಿ.ಸಿ.ಜಿ ತಂಡ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 13:52 IST
Last Updated 5 ಏಪ್ರಿಲ್ 2021, 13:52 IST
ಗೋಣಿಕೊಪ್ಪಲಿನ ಸಿ.ಸಿ.ಜಿ ತಂಡ ಪ್ರಶಸ್ತಿ ಸ್ವೀಕರಿಸಿತು
ಗೋಣಿಕೊಪ್ಪಲಿನ ಸಿ.ಸಿ.ಜಿ ತಂಡ ಪ್ರಶಸ್ತಿ ಸ್ವೀಕರಿಸಿತು   

ಸಿದ್ದಾಪುರ: ಮಾಲ್ದಾರೆ ಜನಪರ ಸಂಘ ಆಯೋಜಿಸಿದ್ದ ‘ಜನಪರ ಟ್ರೋಫಿ’ ವಾಲಿಬಾಲ್ ಟೂರ್ನಿಯಲ್ಲಿ ಗೋಣಿಕೊಪ್ಪಲಿನ ಸಿ.ಸಿ.ಜಿ ತಂಡ ಚಾಂಪಿಯನ್‌ ಆಯಿತು.

ಫೈನಲ್ ಪಂದ್ಯದಲ್ಲಿ ‘ಎ.ವೈ.ಸಿ ನಾಪೋಕ್ಲು’ ತಂಡ ಸೋತು ದ್ವಿತೀಯ ಸ್ಥಾನ ಹಾಗೂ ಟೆ.ಕೆ. ತಂಡ ತೃತೀಯ ಸ್ಥಾನದ ಪ್ರಶಸ್ತಿ ಪಡೆದುಕೊಂಡವು. ಉತ್ತಮ ಆಟಗಾರನಾಗಿ ಆದಿಲ್, ಉತ್ತಮ ಡಿಫೆಂಡರ್ ಆಗಿ ಹಮೀದ್, ಉತ್ತಮ ಬ್ಲಾಕರ್ ಪ್ರಜು,
ಉತ್ತಮ ಸ್ಮ್ಯಾಶರ್ ಆಗಿ ಅರ್ಪಿತ್, ಉತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ಚಿನ್ನು ಪಡೆದುಕೊಂಡರು.

ಜಿಲ್ಲೆಯ ನಾನಾ ಭಾಗಗಳಿಂದ ಸುಮಾರು 17 ತಂಡಗಳು ಭಾಗವಹಿಸಿದ್ದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಮಾಡಲಾಯಿತು.

ADVERTISEMENT

ಫೈಟರ್ ಕ್ಲಿಂಟನ್ ಡಿಕ್ರೂಜ್, ಸಮಾಜ ಸೇವಕ ಮಡಿಕೇರಿಯ ಕ್ರಿಯೆಟಿವ್ ಖಲೀಲ್, ಮಾಧ್ಯಮ ಕ್ಷೇತ್ರದ ಸಾಧನೆಗೆ ಎಸ್.ಎಂ ಮುಬಾರಕ್ ಸಿದ್ದಾಪುರ, ಅಂತರರಾಷ್ಟ್ರೀಯ ವಾಲಿಬಾಲ್‌ಪಟು ರಂಶಾದ್ ಪಾಲಿಬೆಟ್ಟ, ಸಮಾಜ ಸೇವಕ ಜೆ.ಕೆ. ಅಪ್ಪಾಜಿ, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ನಜೀಲಾ, ಸಹನಾ, ಚೇತನ್ ಕುಮಾರ್ ಸೇರಿದಂತೆ ಮತ್ತಿತರರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಮಾಲ್ದಾರೆ ಜನಪರ ಸಂಘದ ಆಂಟೋನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷರಾದ ಸಮೀರ್, ಮುತ್ತಪ್ಪ ಚಂಡಮೇಳ ಸಮಿತಿಯ ಅಧ್ಯಕ್ಷ ಶಾಜಿ, ಕೆ.ಸಿ.ಎಲ್ ಸಮಿತಿಯ ಪ್ರಮುಖ ಎಂ.ಎ. ಅಜೀಜ್, ಬೆಳೆಗಾರಾದ ಚುಮ್ಮಿ ಪೂವಯ್ಯ, ಕುಕ್ಕನೂರು ಪ್ರಕಾಶ್, ಕವಿತಾ ಪ್ರಕಾಶ್, ಪ್ರಮುಖರಾದ ಜೆ.ಕೆ ಅಪ್ಪಾಜಿ, ಕ್ರಿಯೇಟಿವ್ ಕಲೀಲ್, ಕಲಾವಿದ ಭಾವ ಮಾಲ್ದಾರೆ, ವರ್ಗಿಸ್, ಮಣಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.