ADVERTISEMENT

ಅಂಗನವಾಡಿ ಕಟ್ಟಡ ತೆರವು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 7:40 IST
Last Updated 23 ಸೆಪ್ಟೆಂಬರ್ 2011, 7:40 IST
ಅಂಗನವಾಡಿ ಕಟ್ಟಡ   ತೆರವು: ಪ್ರತಿಭಟನೆ
ಅಂಗನವಾಡಿ ಕಟ್ಟಡ ತೆರವು: ಪ್ರತಿಭಟನೆ   

ಮುಳಬಾಗಲು: ತಾಲ್ಲೂಕು ಮಡಿವಾಳ ಗ್ರಾಮದ ಅಂಗನವಾಡಿ ಕಟ್ಟಡ ಕೇಂದ್ರವನ್ನು ಸ್ಥಳೀಯ ವ್ಯಕ್ತಿಯೊಬ್ಬರು ಪ್ರಭಾವ ಬಳಸಿ ಏಕಾಏಕಿ ಕೆಡವಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

40 ವರ್ಷದ ಹಿಂದೆ ಮಡಿವಾಳ ಗ್ರಾಮದ ಖಾತೆ ನಂ.62ರ ನಿವೇಶನದಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗಿತ್ತು. ನಂತರ ಹೊಸ ಕಟ್ಟಡ ನಿರ್ಮಿಸಿ ಶಾಲೆ ಸ್ಥಳಾಂತರಿಸಲಾಗಿತ್ತು. ನಂತರ ಹಳೇ ಶಾಲಾ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿತ್ತು.

ಈಗ 7-8 ದಿನಗಳ ಹಿಂದೆ ಮಡಿವಾಳದ ಜಿ.ಪಾಪಣ್ಣ ಎಂಬುವರು ಅಧಿಕಾರಿಗಳ ಗಮನಕ್ಕೆ ತರದೆ ಜೆಸಿಬಿ ಯಂತ್ರದಿಂದ ಅಂಗನವಾಡಿ ಕಟ್ಟಡವನ್ನು ಕೆಡವಿರುವುದು ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಸದಸ್ಯರು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ  ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದ ಸದಸ್ಯರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ದಲಿತ ಸಂಘರ್ಷ ಸಮಿತಿ ಸಂಚಾಲಕ ಕೀಲುಹೊಳಲಿ ಸತೀಶ್,  ಸಂಚಾಲಕ ಜಮ್ಮನಹಳ್ಳಿ ಜಗದೀಶ್, ಖಜಾಂಚಿ ಬಂಗವಾದಿ ಶ್ರೀನಿವಾಸ್, ಬೈರಕೂರು ಶಿವಶಂಕರ್, ನಗರ ಸಮಿತಿ ಹರೀಶ್, ವಿ.ಕೆ.ರಾಜು, ಕಲಾವಿದ ನರಸಿಂಹ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT