ADVERTISEMENT

ಅಂಚೆ ನೌಕರರ ದ್ವೈವಾರ್ಷಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ಮೇ 2012, 19:30 IST
Last Updated 27 ಮೇ 2012, 19:30 IST

ಮಾಲೂರು: ಅಂಚೆ ಇಲಾಖೆ ಗ್ರಾಮೀಣ ಭಾಗದ ಜನತೆಯ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಇಲ್ಲಿ ಭಾನುವಾರ ಹೇಳಿದರು.

ರಾಷ್ಟ್ರೀಯ ಅಂಚೆ ನೌಕರರ ಸಂಘ, ಪಿಐಐಐ ಪೋಸ್ಟ್ ಮ್ಯಾನ್ ಹಾಗೂ `ಡಿ~ ಗ್ರೂಪ್ ಗ್ರಾಮೀಣ ಡಾಕ್ ಸೇವಕರ ಸಂಘ ಚಿಕ್ಕಬಳ್ಳಾಪುರ- ಕೋಲಾರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ 25ನೇ ಜಂಟಿ ದ್ವೈವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಗ್ರಾಮೀಣ ಜನತೆ ಅಂಚೆ ಇಲಾಖೆಯನ್ನೇ ಅವಲಂಬಿಸಿದ್ದಾರೆ. ಕೆಲವು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಸೈಕಲ್‌ಗಳ ಮೂಲಕ, ಕಾಲ್ನಡಿಗೆಯಲ್ಲಿ ಅಂಚೆ ಸರಬರಾಜು ಮಾಡುತ್ತಿರುವ ಪೋಸ್ಟ್‌ಮ್ಯಾನ್‌ಗಳ ಕಾರ್ಯ ಶ್ಲಾಘನೀಯ. ಇಲಾಖೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಸಂಬಂಧಪಟ್ಟ ಸಚಿವರ ಬಳಿ ಚರ್ಚೆ ನಡೆಸುವುದಾಗಿ ತಿಳಿಸಿದರು.

ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಗೌಡ, ಸ್ಥಾಯಿ ನ್ಯಾಯ ಸಮಿತಿ ಅಧ್ಯಕ್ಷ ಎಸ್.ವಿ.ಲೋಕೇಶ್, ಕೇಂದ್ರ ಆಹಾರ ನಿಗಮ ಸದಸ್ಯ ಸಿ.ಲಕ್ಷ್ಮೀನಾರಾಯಣ್, ಪುರಸಭಾ ಅಧ್ಯಕ್ಷ ಎ.ರಾಜಪ್ಪ, ಕೆಪಿಸಿಸಿ ಸದಸ್ಯ ಎಚ್.ಕೆ.ಗೋವಿಂದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಇ.ರಾಮೇಗೌಡ, ಎಂ.ನಾರಾಯಣಸ್ವಾಮಿ, ಜೆ.ಕೃಷ್ಣಸಿಂಗ್, ಮುಖಂಡ ಎಸ್.ವಿ.ಶ್ರೀಹರಿ, ದಿನೇಶ್‌ಗೌಡ, ಅಂಚೆ ಇಲಾಖೆ ವಲಯ ಕಾರ್ಯದರ್ಶಿ ಬಿ.ಶಿವಕುಮಾರ್, ಗಂಗಯ್ಯ, ಎಂ.ಪಿ.ಚಿತ್ರಸೇನ, ವಿ.ಶ್ರೀರಾಮಪ್ಪ, ಜಿಲ್ಲಾ ಗ್ರಾಮೀಣ ಡಾಕ್ ಸೇವಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಕೃಷ್ಣಪ್ಪ, ಕಾರ್ಯದರ್ಶಿ ಜೆ.ಮುನಿಸ್ವಾಮಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.