ADVERTISEMENT

ಎ್ಲ್ಲಲ ಶಾಲೆಗಳ್ಲ್ಲಲಿ ಸೇವಾದಲ ಶಾಖೆ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 8:45 IST
Last Updated 8 ಆಗಸ್ಟ್ 2012, 8:45 IST

ಮುಳಬಾಗಲು: ತಾಲ್ಲೂಕಿನ 425 ಶಾಲೆ-ಕಾಲೇಜುಗಳಲ್ಲಿ ಭಾರತ ಸೇವಾದಲ ಶಾಖೆ ಪ್ರಾರಂಭಿಸಲು ಶ್ರಮಿಸುವುದಾಗಿ ಶಾಸಕ ಅಮರೇಶ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಭಾರತ ಸೇವಾದಲದ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತ್ಯಾಗ, ಸೇವೆ, ದೇಶಭಕ್ತಿಗೆ ಭಾರತ ಸೇವಾದಲ ಹೆಸರಾಗಿದೆ. ಇದರ ಸಂಸ್ಥಾಪಕ ಹರ್ಡೀಕರ್ ಅವರನ್ನು ಯುವ ಜನತೆ ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದರು.

ರಾಜಕೀಯ ಸಂಘರ್ಷಗಳಿಗೆ ಸೇವಾದಲದ ಹಾದಿ ಉತ್ತಮ ಪರಿಹಾರ ಎಂದರು. ಮೂರು ದಿನ ನಡೆದ ಭಾರತೀಯ ಸೇವಾದಲ ಶಿಬಿರದಲ್ಲಿ ಐವತ್ತು ಮಂದಿ ಭಾಗವಹಿಸಿದ್ದರು.

ರಾಜ್ಯ ಸೇವಾದಲ ಮುಖಂಡ ಬಿ.ಆರ್.ವೆಂಕಟನಾರಾಯಣ್, ಕ್ಷೇತ್ರ ಶಿಕ್ಷಣಾಧಿಕಾರಿ ವಿಕ್ಟರ್, ತಾಲ್ಲೂಕು ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಜಗನ್ನಾಥ್, ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎನ್.ರಾಜಕುಮಾರ್, ಕಾರ್ಯದರ್ಶಿ ಎಂ.ಶಿವಣ್ಣ, ತಾಲ್ಲೂಕು ಸೇವಾದಲದ ಎನ್.ರೆಡ್ಡಪ್ಪ, ಎಸ್.ಮಂಜುನಾಥ್, ಸುಬ್ಬರಾಯಪ್ಪ. ಜಿಲ್ಲಾ ಸೇವಾದಲ ಸಂಚಾಲಕ ಶಿವಕುಮಾರ್, ಶಿವಾನಂದ, ಜಿಲ್ಲಾ ಸೇವಾದಲ ಕಾರ್ಯಕಾರಿ ಸಮಿತಿ ಸದಸ್ಯ ಓಬಳರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.