ADVERTISEMENT

ಐತಿಹಾಸಿಕ ತಾಣಗಳ ವೀಕ್ಷಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 5:30 IST
Last Updated 7 ಅಕ್ಟೋಬರ್ 2011, 5:30 IST

ಮಾಲೂರು:  ಜಿಲ್ಲೆಯಲ್ಲಿರುವ ಐತಿ ಹಾಸಿಕ ತಾಣಗಳ ವೀಕ್ಷಣೆಯಿಂದ ಸುತ್ತಮುತ್ತಲಿನ ಊರಿನ ಪರಿಚಯದ ಜತೆ ಹಿನ್ನೆಲೆಯನ್ನು ಅರಿಯಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ತಿಳಿಸಿದರು.

ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಚಿಣ್ಣರ 2 ದಿನಗಳ ಜಿಲ್ಲಾ ದರ್ಶನ ಕಾರ್ಯಕ್ರಮಕ್ಕೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.

ತಾಲ್ಲೂಕಿನಿಂದ 50 ವಿದ್ಯಾರ್ಥಿಗಳಂತೆ 13 ತಂಡಗಳಲ್ಲಿ ಹಂತ ಹಂತವಾಗಿ ಡಿಸೆಂಬರ್ ತಿಂಗಳಾಂತ್ಯದಲ್ಲಿ  ಐತಿಹಾಸಿಕ ತಾಣಗಳ ಪರಿಚಯದಿಂದ ಪಠ್ಯಕ್ಕೆ ಪೂರ್ವಕವಾದ ಅಂಶಗಳ ಅಧ್ಯಯನಕ್ಕೆ ಸಹಾಯಕವಾಗಲಿದೆ ಎಂದರುಪ್ರತಿ ವಿದ್ಯಾರ್ಥಿಗಳು ತಾವು ವೀಕ್ಷಣೆ ಮಾಡಿದ ಸ್ಥಳದ ಬಗ್ಗೆ ಪ್ರವಾಸದ ನಂತರ ಸಂಕ್ಷಿಪ್ತ ವರದಿಯನ್ನು  ಮುಖ್ಯ ಶಿಕ್ಷಕರ ಮುಖಾಂತರ ಬಿಆರ್‌ಸಿ  ಕೇಂದ್ರಕ್ಕೆ ನೀಡಿದರೆ ಅತ್ಯುತ್ತಮ ವರದಿಗೆ ಬಹುಮಾನ ಸಹ ನೀಡಲಾಗುವುದು ಎಂದರು.

ಬಿಆರ್‌ಸಿ ಕೆಂಪಯ್ಯ, ಇಸಿಒ ಗಂಗಾಧರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುನಿ ನಾರಾಯಣಪ್ಪ, ಕಾರ್ಯದರ್ಶಿ ನರಸಿಂಹ ಹಾಗೂ ಮುಖಂಡ ಎಂ.ಜಿ. ನರಸಿಂಹರಾವ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.