ADVERTISEMENT

ಒಕ್ಕೂಟಕ್ಕೆ 12 ಕೋಟಿ ಪ್ರೋತ್ಸಾಹ ಧನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 5:00 IST
Last Updated 28 ಜನವರಿ 2012, 5:00 IST
ಒಕ್ಕೂಟಕ್ಕೆ 12 ಕೋಟಿ ಪ್ರೋತ್ಸಾಹ ಧನ
ಒಕ್ಕೂಟಕ್ಕೆ 12 ಕೋಟಿ ಪ್ರೋತ್ಸಾಹ ಧನ   

ಮುಳಬಾಗಿಲು: ಕೋಲಾರ- ಚಿಕ್ಕಬಳ್ಳಾ ಪುರ ಹಾಲು ಒಕ್ಕೂಟದಲ್ಲಿ ಶುದ್ಧ ಹಾಲನ್ನು ಪಡೆದುಕೊಳ್ಳಲು ತಾಂತ್ರಿಕತೆ ಅಳವಡಿಸಿಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎ.ವಿ.ಪ್ರಸನ್ನ ತಿಳಿಸಿದರು.

ತಾಲ್ಲೂಕಿನ ಕೋಗಿಲೇರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ನೂತನ ಬಿಎಂಸಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ವಿದೇಶದಲ್ಲಿ ಸಹ ನಂದಿನಿ ಟೆಟ್ರಾ ಪ್ಯಾಕೇಟ್ ಹಾಲಿಗೆ ಬೇಡಿಕೆ ಇದ್ದು, ಸಿಂಗಾಪುರ ಸಹ ನಮ್ಮ ಹಾಲನ್ನು ಖರೀದಿಸುತ್ತಿದೆ ಎಂದರು.

ಕೇಂದ್ರ ಸರ್ಕಾರ ಗುಣಮಟ್ಟದ ಹಾಲನ್ನು ಉತ್ಪಾದಿಸಲು ಒಕ್ಕೂಟಕ್ಕೆ ರೂ. 12 ಕೋಟಿ ಪ್ರೋತ್ಸಾಹ ಧನ ನೀಡಿರುತ್ತದೆ. ಜಿಲ್ಲೆಯ ಮಾಲೂರು, ಮುಳಬಾಗಿಲು, ಬಂಗಾರಪೇಟೆ ತಾಲ್ಲೂಕುಗಳಲ್ಲಿ ಖಾಸಗಿ ಡೇರಿಗಳ ಹಾವಳಿ ಹೆಚ್ಚಾಗಿದೆ ಎಂದರು.

ಒಕ್ಕೂಟದ ಕಾರ್ಯನಿರ್ವಾಹ ನಿರ್ದೇಶಕ ಜಿ.ಟಿ.ಗೋಪಾಲ್ ಮಾತ ನಾಡಿ, ಜಿಲ್ಲೆಯಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚು ರೀತಿ ಮೇವು ಬೆಳೆಸಲು ಕೇಂದ್ರ ಸರ್ಕಾರ ಜಿಲ್ಲೆಯನ್ನು ಆಯ್ಕೆ ಮಾಡಿದೆ. ಒಕ್ಕೂಟದಿಂದ ಹಸುಗಳ ಚಿಕಿತ್ಸೆಗೆ 3 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಡೇರಿಗಳ ಮೂಲಕ ಈ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.

ಕೋಮುಲ್ ಮಾಜಿ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವಿ.ಸಾಮೇಗೌಡ, ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ಜೆಡಿಎಸ್ ಮುಖಂಡ ಮುನಿಆಂಜಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಘುಪತಿರೆಡ್ಡಿ, ಆರ್‌ಎಂಸಿ ಉಪಾಧ್ಯ್ಯಕ್ಷ ಕೆ.ಎಂ.ಸೋಣ್ಣೇ ಗೌಡ, ಟೌನ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಕೆ.ಎಸ್.ಕೃಷ್ಣಮೂರ್ತಿ,  ಸುಧಾತಿಮ್ಮರಾಜು,  ಟಿ.ವಿ ಭೂಪತಿ ರೆಡ್ಡಿ, ಬಾಲಾಜಿ, ಉಪ ವ್ಯವಸ್ಥಾಪಕ ಡಾ.ಸಿ.ಪುಣ್ಯಕೋಟಿ, ವ್ಯವಸ್ಥಾಪಕ ಕೆ.ವಿ.ನಾರಾಯಣಸ್ವಾಮಿ, ಅಧಿಕಾರಿ ಗಳಾದ ನರಸಿಂಹರೆಡ್ಡಿ, ಮುರಳಿನಾಥ್, ಹಾಲು ಉತ್ಫಾದಕರ ಸಂಘ ಅಧ್ಯಕ್ಷ ಗೋವಿಂದಪ್ಪ, ಕಾರ್ಯದರ್ಶಿ ಎಂ.ಸುಬ್ರಮಣಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.