ADVERTISEMENT

ಕಾರಂತರ ಕೃತಿಗಳ ಅಧ್ಯಯನ ನಡೆಯಲಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 6:20 IST
Last Updated 11 ಅಕ್ಟೋಬರ್ 2011, 6:20 IST

ಮಾಲೂರು: ತಾಲ್ಲೂಕಿನ ಹುರಳಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ  ಡಾ.ಶಿವರಾಮ ಕಾರಂತರ 109ನೇ ಜನ್ಮ ದಿನಾಚರಣೆ ಸಮಾರಂಭ ನಡೆಯಿತು.

`ಸಕಲ ಜೀವಿಗಳ ಶ್ರೇಯಸ್ಸು ಬಯಸುತ್ತಾ ಸಾಹಿತ್ಯವನ್ನು ರಚಿಸಿದ ಶ್ರೇಷ್ಠ ಸಾಹಿತಿ ಡಾ.ಶಿವರಾಮ ಕಾರಂತರಾಗಿದ್ದಾರೆ. ಅಂತಹ ಸಾಹಿತಿಯ ಕೃತಿಗಳ ಅಧ್ಯಯನ ಮನುಕುಲಕ್ಕೆ ಅಗತ್ಯವಾಗಿದೆ ಎಂದು ತಾ.ಪಂ. ಸದಸ್ಯ ಮಾರಸಂದ್ರ ಪುಟ್ಟಸ್ವಾಮಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಎ.ಅಶ್ವತ್ಥರೆಡ್ಡಿ ಮಾತನಾಡಿ, ಉನ್ನತ ಅನುಭವ ಸಿಗಬೇಕಾದರೆ ಕಾರಂತರ ಕೃತಿಗಳ ಅಧ್ಯಯನವನ್ನು ಪ್ರತಿಯೊಬ್ಬರು ಮಾಡಬೇಕು ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎ.ಬಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.ಬಿಇಒ ವೆಂಕಟರಾಮರೆಡ್ಡಿ, ನೊಸ ಗೆರೆ ಗ್ರಾ.ಪಂ. ಸದಸ್ಯರಾದ ಬಿ.ಎನ್.ಮಲ್ಲಿ ಕಾರ್ಜುನಯ್ಯ, ಕಲಾವಿದ ನಾಗರಾಜ್, ಸಿ.ಎಂ.ನಾರಾ ಯಣಸ್ವಾಮಿ, ಎಂ.ಕೃಷ್ಣಪ್ಪ, ಉಪನ್ಯಾಸಕರಾದ ಜೆ.ಜೆ.ನಾಗರಾಜ್, ಚಂದ್ರಪ್ಪ, ರಾಜಪ್ಪ, ಎಂ.ವಿ.ನಾಗರಾಜ್, ಜಗನ್ನಾಥ್, ಎಸ್‌ಡಿಎಂಸಿ ಅಧ್ಯಕ್ಷ ಮುನಿಸ್ವಾಮಿ,   ಮುನಿಸ್ವಾಮಿ, ಲತಾಬಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.