ADVERTISEMENT

ಕೋರಂ ಕೊರತೆಗೆ ರಾಜ`ಕಾರಣ'

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 5:10 IST
Last Updated 1 ಡಿಸೆಂಬರ್ 2012, 5:10 IST

ಕೋಲಾರ: ಕೋರಂ ಕೊರತೆಯಿಂದಾಗಿ ಕಳೆದ ಬುಧವಾರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯನ್ನು ಮುಂದೂಡಲಾಗಿತ್ತು. ಅದಕ್ಕೆ ರಾಜಕಾರಣವೇ ಮುಖ್ಯ ಕಾರಣ ಎಂಬ ಮಾತು ಜಿಲ್ಲೆಯಲ್ಲಿ ಪ್ರಸ್ತುತ ಕೇಳಿ ಬರುತ್ತಿದೆ.

ಕಳೆದ ಅ 5ರಂದು ಆಧ್ಯಕ್ಷ- ಉಪಾಧ್ಯಕ್ಷ ಆಯ್ಕೆಯ ಸಂದರ್ಭದಲ್ಲಿ ಮುಖಭಂಗ ಆನುಭವಿಸಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂ ಸಚಿವ ವರ್ತೂರು ಪ್ರಕಾಶ್ ಬಣದ ಸದಸ್ಯರು ಗೈರು ಹಾಜರಾದ ಪರಿಣಾಮ ಕೋರಂ ಕೊರತೆ ಕಂಡುಬಂದಿತು.

ಸಚಿವ ವರ್ತೂರು ಬಣದ ಸದಸ್ಯೆ ಚೌಡೇಶ್ವರಿ ಜೆಡಿಎಸ್ ಪಾಳೆಯಕ್ಕೆ ಸೇರಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಈ ಬಾರಿ ಆವರ ಆಧ್ಯಕ್ಷತೆಯಲ್ಲಿ ಸಭೆ ನಡೆಯಬೇಕಿತ್ತು. ಆದರೆ ಜೆಡಿಎಸ್‌ನ 10 ಸದಸ್ಯರನ್ನು ಹೊರತುಪಡಿಸಿ ಉಳಿದ 18 ಸದಸ್ಯರು ಸಭೆಗೆ ಬರಲಿಲ್ಲ. ಬೆಳಿಗ್ಗೆ 11ರಿಂದ ಮಧ್ಯಾಹ್ನ 12 ಗಂಟೆವರೆಗೆ ಕಾದರೂ ಕೋರಂ ಕೊರತೆ ನೀಗಲಿಲ್ಲ. ಆನಿವಾರ್ಯವಾಗಿ ಸಭೆಯನ್ನು ಆಧ್ಯಕ್ಷೆ ಡಿ.15ಕ್ಕೆ ಮುಂದೂಡಿದರು. 

ನಂತರ, ಸಭೆಗೆ ಹಾಜರಾಗಿದ್ದ ಆಧಿಕಾರಿಗಳೊಡನೆ ಸಮಸ್ಯೆಗಳ ಬಗ್ಗೆ ಚರ್ಚೆ ಶುರುಮಾಡಿದರೂ ಹಾಜರಿದ್ದ ಸದಸ್ಯರು ಆಸಕ್ತಿ ತೋರಲಿಲ್ಲ. ಹೀಗಾಗಿ 12.30ಕ್ಕೆ ಸಭೆಯನ್ನು ಕೊನೆಗೊಳಿಸಲಾಯಿತು.

ಸಭೆಗೆ 20 ದಿನ ಮುಂಚೆಯೇ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ಚುನಾವಣೆಗೆ ಸೀಮಿತವಾಗಿದ್ದ ರಾಜಕೀಯವನ್ನು ಸದಸ್ಯರು ಸಾಮಾನ್ಯ ಸಭೆಗೂ ವಿಸ್ತರಿಸಿದ್ದಾರೆ. ಜಿಲ್ಲೆಯ ಆಭಿವೃದ್ಧಿಗೆ ಅಸಹಕಾರ ತೋರುತ್ತಿದ್ದಾರೆ ಎಂದು ಚೌಡೇಶ್ವರಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.