ADVERTISEMENT

ಕ್ರಿಸ್ತನ ಪುನರುತ್ಥಾನ: ವಿಶೇಷ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 8:15 IST
Last Updated 9 ಏಪ್ರಿಲ್ 2012, 8:15 IST

ಕೋಲಾರ: ನಗರದ ಮೆಥೋಡಿಸ್ಟ್ ಚರ್ಚ್ ಆವರಣದಲ್ಲಿ ಭಾನುವಾರ ಬೆಳಗಿನ ಜಾವ ವಿಶೇಷ ಪ್ರಾರ್ಥನೆ ಪ್ರತಿಧ್ವನಿಸಿತ್ತು. ನೂರಾರು ಕ್ರೈಸ್ತರು ದನಿ ಗೂಡಿಸಿ ತಮ್ಮ ದೇವ ಯೇಸುಕ್ರಿಸ್ತನನ್ನು ಪ್ರಾರ್ಥಿಸಿದರು. 

 ಹಿರಿಯರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರೂ ಹೊಸ ಬಟ್ಟೆ ಧರಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂ ಡಿದ್ದು ವಿಶೇಷವಾಗಿತ್ತು.

ಯೇಸುಕ್ರಿಸ್ತನನ್ನು ಶಿಲುಬೆಗೆ ಏರಿಸಿದ ದಿನದ ಸ್ಮರಣೆಗಾಗಿ ಆಚರಿಸಲಾಗುವ ಶುಭ ಶುಕ್ರವಾರ (ಹೋಲಿ ಫ್ರೈಡೇ) ಪ್ರಯುಕ್ತ ಕಳೆದ ಶುಕ್ರವಾರ ನಗರ ಮತ್ತು ತಾಲ್ಲೂಕಿನ ವಿವಿಧ ಚರ್ಚ್‌ಗಳಲ್ಲಿ ಕ್ರೈಸ್ತರು ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದರು.
 
ಸಾಂಕೇತಿಕವಾಗಿ ಶಿಲುಬೆ ಹೊತ್ತ ಬಾಲಕ, ಬಾಲಕಿಯರ ವೆುರ ವಣಿಗೆಯೂ ನಡೆದಿತ್ತು.  ಶಿಲುಬೆಗೆ ಏರಿ ಸಿದ ಮೂರು ದಿನದ ಬಳಿಕ  ಕ್ರಿಸ್ತ ಮತ್ತೆ ಹುಟ್ಟಿ ಬಂದ ಎಂಬ ನಂಬಿಕೆಯ ಹಿನ್ನೆಲೆ ಯಲ್ಲಿ ಭಾನುವಾರ ಬೆಳಗಿನ ಜಾವವೇ ನೆರೆದ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದ ಪ್ರಯುಕ್ತ ಆವರಣದಲ್ಲಿ ವಿಶೇಷ ವೇದಿಕೆಯನ್ನು ಸಿದ್ಧಪಡಿಸ ಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.