ADVERTISEMENT

ಜಾನಪದಕ್ಕೆ ವೈಜ್ಞಾನಿಕ ನೆಲೆ: ವೆಂಕಟಾಚಲ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 8:05 IST
Last Updated 22 ಫೆಬ್ರುವರಿ 2012, 8:05 IST

ಶ್ರೀನಿವಾಸಪುರ: ಜಾನಪದಕ್ಕೆ ವೈಜ್ಞಾನಿಕ ನೆಲೆ ಇದೆ. ನಮ್ಮ ಹಿರಿಯರು ಮಾನಸಿಕ ಒತ್ತಡ ಹಾಗೂ ಬಳಲಿಕೆಯಿಂದ ಪಾರಾ ಗಲು ಜಾನಪದ ಹುಟ್ಟು ಹಾಕಿದರು. ಹಾಡು, ಆಟಗಳ ಮೂಲಕ ಆರೋಗ್ಯ ಕಾಯ್ದುಕೊಳ್ಳುತ್ತಿದ್ದರು. ಜಾನಪದ ಸಂಸ್ಕೃತಿ ಆದರ್ಶವಾಗಬೇಕು ಎಂದು ಜಗುಲಿ ಸಾಂಸ್ಕೃತಿಕ ಸಂಸ್ಥೆ ಗೌರವಾಧ್ಯಕ್ಷ ಡಾ.ವೆಂಕಟಾಚಲ ಹೇಳಿದರು.

ಪಟ್ಟಣದಲ್ಲಿ ಸೋಮವಾರ ರಾತ್ರಿ ಶಿವರಾತ್ರಿ ಪ್ರಯುಕ್ತ ಜಗುಲಿ ಸಾಂಸ್ಕೃತಿಕ ಸಂಸ್ಥೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜನಪದ ಉತ್ಸವ ಉದ್ಘಾಟನಾ ಸಮಾ ರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನವರು ಬಹಳ ಬೇಗ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ದುಡಿಮೆ ಕಷ್ಟವಾಗಿ ಪರಿಣಮಿಸಿದೆ. ಒತ್ತಡದಿಂದ ಪಾರಾಗಲು ದುಶ್ಚಟಗಳಿಗೆ ದಾಸರಾಗುತ್ತಿರುವುದು ಕಳವಳಕಾರಿ ಎಂದರು.

ಜಗುಲಿ ಅಧ್ಯಕ್ಷ ಎನ್.ಬಿ. ಗೋಪಾಲಗೌಡ ಮಾತನಾಡಿ, ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಗಳನ್ನು ಜನರಿಗೆ ಪರಿಚಯಿಸುವ ಹಾಗೂ ಜಾನ ಪದ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಜಾನಪದ ಉತ್ಸವ ಏರ್ಪಡಿಸಲಾಗಿದೆ. ಕಲೆ ಮತ್ತು ಕಲಾ ವಿದರನ್ನು ಗೌರವಿಸುವ ನಮ್ಮ ಸಂಪ್ರ ದಾಯವನ್ನು ಯುವ ಸಮುದಾಯ ಮುಂದುವರೆಸಿಕೊಂಡು ಹೋಗಬೇಗಾದ ಅಗತ್ಯವಿದೆ ಎಂದು ಹೇಳಿದರು.

ಬೊಮ್ಮಲಾಟಪುರದ ತೊಗಲು ಗೊಂಬೆ ಕಲಾವಿದ ಎಸ್.ಶಂಕರಪ್ಪ ಉತ್ಸವ ಉದ್ಘಾಟಿಸಿದರು. ಜಗುಲಿ ಕಾರ್ಯದರ್ಶಿ ಸಿ.ಶ್ರೀನಿವಾಸಮೂರ್ತಿ, ಸಂಘಟನಾ ಕಾರ್ಯದರ್ಶಿ ಬ್ಯಾಂಕ್ ನಾರಾಯಣಸ್ವಾಮಿ, ಸಾಹಿತಿ ಸ. ರಘುನಾಥ, ಜನಪದ ಸಂಶೋಧಕ ಡಾ. ಶ್ರೀನಿವಾಸಯ್ಯ ಭಾಗವಹಿಸಿದ್ದರು.

ಬೊಮ್ಮಲಾಟಪುರದ ಎಸ್.ಶಂಕರಪ್ಪ ಮತ್ತು ತಂಡದವರು ತೊಗಲು ಗೊಂಬೆ ಯಾಟ ನಡೆಸಿಕೊಕೊಟ್ಟರು. ಕುರಿಪಲ್ಲಿ ವೆಂಕಟೇಶಪ್ಪ ಏಕಪಾತ್ರಾಭಿನಯ ಮಾಡಿ ದರು. ಮರಿಪಲ್ಲಿ ರಾಮಣ್ಣ ರಂಗಭೂಮಿಯ ಹಾಸ್ಯ ಪಾತ್ರ ಪ್ರದರ್ಶಿಸಿದರು. ಚಲ್ದಿಗಾನಹಳ್ಳಿ ಕೃಷ್ಣಪ್ಪ ಮತ್ತು ಗೆಳೆಯರು ಕೋಲಾಟ ನಡೆಸಿ ಕೊಟ್ಟರು.

ನಾರವಮಾಕಲಹಳ್ಳಿ ಹುಂಜ ಮುನಿರೆಡ್ಡಿ ಮತ್ತು ತಂಡದವರು ಜನಪದ ಗೀತೆ ಗಾಯನ ಮಾಡಿದರು. ದೊಡಮಲದೊಡ್ಡಿ ಗ್ರಾಮದ ಜನಪದ ಗಾಯಕರಾದ ನಾರೆಮ್ಮ, ಲಕ್ಷ್ಮಕ್ಕ, ವೆಂಕಟರತ್ನಮ್ಮ, ಗಂಗುಲಮ್ಮ, ಶಾಂತಮ್ಮ, ಬೈಯ್ಯಮ್ಮ, ರಾಮಕ್ಕ ಅವರು ಸಾಂಪ್ರದಾಯಿಕ  ಗಬ್ಬಿಯ್ಯಾಳು ಪದಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.