ADVERTISEMENT

ನಿರುದ್ಯೋಗಿಗಳಿಗೆ ಕಾರ್ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 5:09 IST
Last Updated 1 ಡಿಸೆಂಬರ್ 2012, 5:09 IST

ಕೋಲಾರ: ವಿಶೇಷ ಘಟಕ ಯೋಜನೆ ಆಡಿಯಲ್ಲಿ ತರಬೇತಿ ಪಡೆದ ನಿರುದ್ಯೋಗಿ ಯುವಕರಿಗೆ ಪ್ರವಾಸೋದ್ಯಮ ಇಲಾಖೆಯು ನೀಡುವ ಕಾರ್‌ಗಳನ್ನು ಸಚಿವ ಆರ್.ವರ್ತೂರು ಪ್ರಕಾಶ್ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಚೆಗೆ ವಿತರಿಸಿದರು.

ಕಾರುಗಳನ್ನು ನಿರುದ್ಯೋಗಿಗಳು ಸದ್ಬಳಕೆ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ, ಎಸ್‌ಎಸ್‌ಎಲ್‌ಸಿ ಪಾಸಾದ ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ರೂಪಿಸಿರುವ ಯೋಜನೆಯಡಿಯಲ್ಲಿ ಕಾರುಗಳನ್ನು ನೀಡಲಾಗುತ್ತಿದೆ. ಕಾರನ್ನು ಮಾರಬಾರದು. ಬಾಡಿಗೆಗೆ ನೀಡಬಾರದು ಎಂದರು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸಮೂರ್ತಿ, ಮುಖಂಡರಾದ ವಿ.ಕೆ.ರಾಜೇಶ, ಸೋಮಶೇಖರ, ಸುರೇಶಕುಮಾರ ಪಾಲ್ಗೊಂಡಿದ್ದರು.
ಪರಿಶಿಷ್ಟ ಜಾತಿಯ 35, ಪರಿಶಿಷ್ಟ ಪಂಗಡದ 7 ಮಂದಿಗೆ ಕಾರುಗಳನ್ನು ನೀಡಲಾಗುತ್ತಿದೆ. ಮೊದಲ  ಹಂತದಲ್ಲಿ 14 ಕಾರುಗಳನ್ನು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.