ADVERTISEMENT

ಮದ್ಯದ ಅಂಗಡಿ ಮುಚ್ಚಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 8:10 IST
Last Updated 4 ಮಾರ್ಚ್ 2012, 8:10 IST

ಕೋಲಾರ: ತಾಲ್ಲೂಕಿನ ಭಟ್ರಹಳ್ಳಿಯಲ್ಲಿ ನೂತನವಾಗಿ ತೆರೆದಿರುವ ಮದ್ಯದ ಅಂಗಡಿಯನ್ನು ಮುಚ್ಚಬೇಕು ಎಂದು ಆಗ್ರಹಿಸಿ ಗ್ರಾಮದ ನಾಗರಿಕರು, ಸ್ತ್ರೀಶಕ್ತಿ ಸಂಘಗಳ ಸದಸ್ಯರು ನಗರದಲ್ಲಿ ಶನಿವಾರ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಬಾಬಣ್ಣ ಅವರಿಗೆ ಮನವಿ ಸಲ್ಲಿಸಿದರು.

ನಗರದ ಹೊರವಲಯದಲ್ಲಿರುವ ಭಟ್ರಹಳ್ಳಿ ಗೇಟಿನಲ್ಲಿ ಮದ್ಯದ ಅಂಗಡಿ ಯನ್ನು ತೆರೆದಿರುವುದರಿಂದ ಆಸುಪಾಸಿನ ಸಾಕಷ್ಟು ಗ್ರಾಮಗಳ ಜನತೆ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಮೇಲಾಗಿ ಈ ಜಾಗವು ಸಾರ್ವಜನಿಕ ಸ್ಥಳವಾಗಿದೆ. ಇಲ್ಲಿಯೇ ಬಸ್ ನಿಲಾದಣವೂ ಇದೆ.
 
ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಣ್ಣಮಕ್ಕಳಿಗೆ ಈ ಸ್ಥಳ ಈಗ ಮುಜುಗರ ಉಂಟು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೆಲವು ತಿಂಗಳ ಹಿಂದೆ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಮದ್ಯದ ಅಂಗಡಿ ಮುಚ್ಚ ಲ್ಪಟ್ಟಿತ್ತು. ಆದರೆ ಮತ್ತೆ ಅಂಗಡಿಯನ್ನು ತೆರೆಯಲಾಗಿದೆ. ಸಾರ್ವಜನಿಕ ಶಾಂತಿ- ನೆಮ್ಮದಿಗೆ ಭಂಗ ಉಂಟಾಗುತ್ತಿದೆ ಎಂದು ದೂರಿದರು.

ಮುನೇಶ್, ವೆಂಕಟೇಶಮೌರ್ಯ, ಕೆಂಪಣ್ಣ, ಅಂಬರೀಶ್, ಪ್ರಸನ್ನ, ವೈ.ಸಿ. ನಾಗರಾಜ್, ಈಶ್ವರಪ್ಪ, ಚಲಪತಿ, ಬಿ. ಕಷ್ಣಪ್ಪ, ವೆಂಕಟರಾಮ್, ಕಷ್ಣಪ್ಪ, ಸ್ತ್ರೀ ಶಕ್ತಿ ಸಂಘಗಳ ಶೋಭ, ಮುನಿ ಚೌಡಮ್ಮ, ಸಾಕಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.