ADVERTISEMENT

ಮರಳು ದಂಧೆಗೆ ಕಡಿವಾಣ ಹಾಕಲು: ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 8:40 IST
Last Updated 3 ಜೂನ್ 2011, 8:40 IST

ಶ್ರೀನಿವಾಸಪುರ: ತಾಲ್ಲೂಕಿನಿಂದ ಬೆಂಗಳೂರಿಗೆ ಮರಳು ಸಾಗಿಸುವ ದಂಧೆಗೆ ಪೂರ್ಣ ಕಡಿವಾಣ ಹಾಕಬೇಕು ಎಂದು ಗಡಿ ಗ್ರಾಮ ರಾಯಲ್ಪಾಡ್‌ನ ಪರಿಸರವಾದಿಗಳು ಆಗ್ರಹಿಸಿದ್ದಾರೆ.

ತಾಲ್ಲೂಕಿನ ತಹಶೀಲ್ದಾರರು ಕೈಗೊಂಡ ಕ್ರಮದಿಂದಾಗಿ ಶ್ರೀನಿವಾಸಪುರ ಹಾಗೂ ರಾಯಲ್ಪಾಡ್ ಸಮೀಪ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡು ದಂಡಹಾಕಿ ಬಿಡಲಾಗಿದೆ.

ಆದರೂ ಈಗ ಚಿಂತಾಮಣಿ ಮೂಲಕ ಹೋಗುತ್ತಿದ್ದ ಮರಳು ಲಾರಿಗಳು ಕೋಲಾರ ರಸ್ತೆಯ ಮೂಲಕ ಬೆಂಗಳೂರನ್ನು ತಲುಪುತ್ತಿವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಅಂತರ್ಜಲದ ಮರುಪೂರಣ ಸಾಧ್ಯವಾಗುವುದಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.