ADVERTISEMENT

ಮುಳಬಾಗಲು: ಆಂಧ್ರ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 6:30 IST
Last Updated 7 ಅಕ್ಟೋಬರ್ 2012, 6:30 IST

ಮುಳಬಾಗಲು: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದು ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬಂದ್ ಪ್ರಯುಕ್ತ ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ವಾಹನ ಸಂಚಾರವಿಲ್ಲದ ಕಾರಣ ಇತರೆಡೆಗಳಿಂದ ಬರುವವರ ಸಂಖ್ಯೆ ವಿರಳವಾಗಿತ್ತು. ಅಂಗಡಿಗಳು ಬಾಗಿಲು ತೆರೆಯಲಿಲ್ಲ. ಸರ್ಕಾರಿ ಕಚೇರಿಗಳಿಗೆ ಹೆಚ್ಚು ಜನ ಭೇಟಿ ನೀಡಲಿಲ್ಲ. ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಕನ್ನಡ ಸಾಹಿತ್ಯ ಪರಿಷತ್, ಜಯ ಕರ್ನಾಟಕ, ಕರವೇ, ರೈತ ಸಂಘ ಮತ್ತು ಹಸಿರು ಸೇನೆ, ರೈತ ಹಕ್ಕುಗಳ ಹೋರಾಟ ಸಮಿತಿ, ಆಟೊ ಚಾಲಕರ ಸಂಘ, ತಾಲೂಕು ಕನ್ನಡ ಒಕ್ಕೂಟ, ಭಜರಂಗದಳ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘ, ಡಿ.ವಿ.ಗುಂಡಪ್ಪ ಗೆಳೆಯರ ಬಳಗ, ಅಟೊ ಚಾಲಕರ ಸಂಘ, ವಕೀಲರ ಸಂಘ, ಕಾರು ಮಾಲೀಕರು ಮತ್ತು ಚಾಲಕರ ಸಂಘ, ಅಖಿಲ ಭಾರತ ಕೀಸಾನ್ ಸಂಘ, ದಲಿತ ಸಂಘಟನೆಗಳ ಒಕ್ಕೂಟ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದವು.

ಕನ್ನಡ ಪರ ಹೋರಾಟಗಾರ ಮು.ಕೃ.ಪದ್ಮನಾಭರಾವ್, ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಕನ್ನಡಭಟ ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಕೇಸರಿ, ಕರವೇ ಮುಖಂಡರಾದ ಶಿವಕುಮಾರ್, ನಂದಕಿಶೋರ್, ಶಕ್ತಿಪ್ರಸಾದ್, ಕೆ.ಎಸ್.ನಾಗೇಶ್‌ಬಾಬು, ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಬಂಗಾರಿ ಮಂಜು, ಜಯಕರ್ನಾಟಕ ಸಂಘಟನೆಯ ಮುಖಂಡ ವಿಶ್ವನಾಥ್, ತ್ರಿಚಕ್ರ ವಾಹನ ಚಾಲಕರ ಸಂಘದ ಅಧ್ಯಕ್ಷ ಶೇಖರ್, ಆಟೊ ಸಂಘದ ಬಾಸ್ಕರ್, ಬಿಜೆಪಿ ಮುಖಂಡ ಎಚ್.ಎಸ್.ಹರೀಶ್, ಬಜರಂಗದಳ ಜಿಲ್ಲಾ ಸಂಚಾಲಕ ಚಲಪತಿ, ದಸಸಂ (ಅಂಬೇಡ್ಕರ್‌ವಾದ) ಸಂಚಾಲಕ ವರದಗಾನಹಳ್ಳಿ ಮುನಿವೆಂಕಟಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಆಂಧ್ರ ಪ್ರದೇಶದ ಗಡಿ ಗ್ರಾಮವಾದ ಹೆಬ್ಬಣಿಯಲ್ಲೂ ಬಂದ್ ಯಶಸ್ವಿಯಾಯಿತು. ಆಂಧ್ರ ಪ್ರದೇಶದಿಂದ ಬರುತ್ತಿದ್ದ ವಾಹನಗಳನ್ನು ತಡೆದು ವಾಪಸ್ಸು ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.