ADVERTISEMENT

ಮೂವರು ವಾರ್ಡನ್ ಅಮಾನತು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 6:30 IST
Last Updated 5 ಮಾರ್ಚ್ 2011, 6:30 IST

ಕೋಲಾರ: ಆಹಾರ ಧಾನ್ಯ ದುರುಪಯೋಗಕ್ಕೆ ಸಂಬಂಧಿಸಿ ತಾಲ್ಲೂಕಿನ ಮೂವರು ವಾರ್ಡನ್‌ಗಳನ್ನು ಸೇವೆಯಿಂದ ಅಮಾನತು ಪಡಿಸಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ನಗರದ ಭೋವಿ ಕಾಲೋನಿಯ ಹಾಸ್ಟೆಲ್‌ನ ನಾಗರತ್ನಮ್ಮ, ಕೋರ್ಟ್ ವೃತ್ತದಲ್ಲಿರುವ ಅಂಬೇಡ್ಕರ್ ನಿಲಯದ ಸ್ನೇಹಲತಾ ಸುಲೋಚನ ಮತ್ತು ತಾಲ್ಲೂಕಿನ ಮದನಹಳ್ಳಿಯ ನಿಲಯದ ಜಾನಕಿ ಅಮಾನತು ಗೊಂಡವರು.

ನಿಲಯಕ್ಕೆ ಮಂಜೂರಾದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿಕೊಳ್ಳುತ್ತಿರುವ ಕುರಿತು ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಸ್.ಎಂ.ಮಂಗಳಾ ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು.

ಇಲಾಖೆ ಆಯುಕ್ತರಿಗೆ ಅದನ್ನು ತಲುಪಿಸಲಾಗಿತ್ತು. ನಂತರ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದ ತಂಡ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.