ADVERTISEMENT

ರಸ್ತೆ ಬದಿ ಕಸ ವಿಲೇವಾರಿ ತಡೆಗೆ ಯೋಜನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 8:15 IST
Last Updated 17 ಜೂನ್ 2011, 8:15 IST

ಕೋಲಾರ: ರಾಜ್ಯಾದ್ಯಂತ ರಸ್ತೆ ಬದಿ ಕಸ ವಿಲೇವಾರಿ ತಡೆಗೆ ಯೋಜನೆಯನ್ನು ರೂಪಿಸ ಲಾಗಿದ್ದು, ಮಾಹಿತಿದಾರರಿಗೆ ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಮೀನುಗಾರಿಕೆ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಜೆ.ಕೃಷ್ಣ ಪಾಲೇಮಾರ್ ತಿಳಿಸಿದರು.

ನಗರಕ್ಕೆ ಬುಧವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಡನೆ ಮಾತನಾಡಿ, ರಸ್ತೆ ಬದಿ ಕಸ ಸುರಿ ಯುವುದನ್ನು ತಡೆಗಟ್ಟುವ ಪ್ರಮುಖ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಕಸ ಸುರಿಯುವ ವಾಹನ ಗಳ ಮಾಹಿತಿ ನೀಡುವವರಿಗೆ ಬಹುಮಾನವನ್ನು ನೀಡ ಲಾಗುವುದು. ವಾಹನಗಳನ್ನು ಮುಟ್ಟುಗೋಲು ಹಾಕಿ ಕೊಳ್ಳಲಾಗುವುದು. ಮಾಹಿತಿದಾರರಿಗೆ ಅನುಕೂಲ ವಾಗುವಂತೆ ರಾಜ್ಯಾದ್ಯಂತ ಒಂದೇ ಬಗೆಯ ದೂರ ವಾಣಿ ಸಂಖ್ಯೆಯನ್ನು ನೀಡಲಾಗುವುದು ಎಂದರು.

`ಕಸ ವಿಲೇವಾರಿಯ ವಿಷಯದಲ್ಲಿ ಸ್ಥಳೀಯ ಆಡಳಿತಗಳೇ ಜವಾಬ್ದಾರಿ ಹೊರಬೇಕು. ಆ ಬಗ್ಗೆ ಈಗಾಗಲೇ ಕಾನೂನಿದ್ದರೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ರಾತ್ರೋರಾತ್ರಿ ರಸ್ತೆ ಬದಿ ಕಸವನ್ನು ಸುರಿದು ಹೋಗುವ ಬೇಜವಾಬ್ದಾರಿ ವರ್ತನೆಗಳು ರಾಜ್ಯದ ಎಲ್ಲೆಡೆ ಕಂಡು ಬರುತ್ತಿವೆ. ಅದಕ್ಕೆ ಕಡಿವಾಣ ಹಾಕುವುದೇ ಯೋಜನೆ ಉದ್ದೇಶ. ಸ್ಥಳೀಯ ಸಂಸ್ಥೆಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು~ ಎಂದರು.

`ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಮಾಲಿನ್ಯ ಮುಕ್ತಗೊಳಿಸುವ ಹೊಸದೊಂದು ಯೋಜನೆಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಶೀಘ್ರದಲ್ಲೆ ಕೈಗೆತ್ತಿಕೊಳ್ಳಲಿದೆ. ಮೊದಲ ಪ್ರಯತ್ನವಾಗಿ, ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿರುವ 120 ಎಕರೆ ವ್ಯಾಪ್ತಿಯ ಅಗರಂ ಕೆರೆಯನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು. ಅಲ್ಲಿನ ಚರಂಡಿ ನೀರನ್ನು ಪುನರ್‌ಬಳಕೆಗೆ ಅರ್ಹಗೊಳಿಸಿ, ಮೀನುಗಾರಿಕೆಗೆ ಉತ್ತೇಜನ ನೀಡಲಾಗುವುದು~ ಎಂದರು.

`ಗ್ರಾಮವೊಂದನ್ನು ಪೂರ್ಣವಾಗಿ ಮಾಲಿನ್ಯ ಮುಕ್ತಗೊಳಿಸುವ ಯೋಜನೆಯನ್ನು ರೂಪಿಸಲಾಗಿದೆ. ರಾಜ್ಯದ ಮೂಲೆಗಳಲ್ಲಿ ಅಂಥ ಗ್ರಾಮಕ್ಕಾಗಿ ಹುಡುಕಾಟ ನಡೆಯುತ್ತಿದೆ. ಗಣಿಗಾರಿಕೆಯೂ ಸೇರಿದಂತೆ ಖಾಸಗಿ ಭೂಮಿಯನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸುವವರಿಗೆ ಪರಿಸರ ರಕ್ಷಣಾ ಶುಲ್ಕವನ್ನು ವಿಧಿಸಲಾಗುವುದು. ಅದರಿಂದ 254 ಕೋಟಿ ಸಂಗ್ರಹಿಸುವ ಗುರಿ ಇದೆ. ಈಗಾಗಲೇ 50 ಕೋಟಿ ಸಂಗ್ರಹವಾಗಿದೆ~ ಎಂದರು.

`ಪಶ್ಚಿಮ ಘಟ್ಟ ವ್ಯಾಪ್ತಿಯ 10 ಪ್ರಮುಖ ಸ್ಥಳಗಳನ್ನು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ವಿರೋಧಿಸಲು ಸಮರ್ಪಕವಾದ ಕಾರಣಗಳಿವೆ. ಪಟ್ಟಿಗೆ ಒಮ್ಮೆ ಹೆಸರು ಸೇರಿಸಿದರೆ ಆ ಸ್ಥಳಗಳಲ್ಲಿ ಅಭಿವೃದ್ಧಿ ಕಾರ್ಯ ಸುಲಭವಲ್ಲ. ಜನರಿಗೂ ಕಷ್ಟ. ಪ್ರತಿಯೊಂದಕ್ಕೂ ಪರವಾನಗಿ ಪಡೆಯುವ ಅನಿವಾರ್ಯತೆಗಿಂತ ಪಟ್ಟಿಯಿಂದ ಹೊರಗಿರುವುದೇ ಲೇಸು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.