ADVERTISEMENT

ಲಕ್ಷಾಧೀಶ ಬಿಜೆಪಿ ಅಭ್ಯರ್ಥಿ !

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 6:40 IST
Last Updated 25 ಮಾರ್ಚ್ 2011, 6:40 IST

ಬಂಗಾರಪೇಟೆ: 58 ವರ್ಷ ವಯಸ್ಸಿನ, ಕ್ಯಾಸಂಬಳ್ಳಿ ನಿವಾಸಿ, ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಲಕ್ಷಾಧೀಶರು. ಜೊತೆಗೆ ಸಾಲಗಾರರು.   ತಮ್ಮ ಮತ್ತು ಕುಟುಂಬದವರ ಹೆಸರಿನಲ್ಲಿ ಲಕ್ಷಾಂತರ ಮೌಲ್ಯದ ಹಣ, ಒಡವೆಗಳಿವೆ. ಅವರು ಕ್ಯಾಸಂಬಳ್ಳಿಯ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ 5.36 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ.ಉಳಿದಂತೆ ಅವರು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನೀಡಿರುವ ಆಸ್ತಿ ವಿವರ ಹೀಗಿದೆ:

ಅವರ ಬಳಿ ನಗದು ಹಣ ರೂ. 1,50 ಲಕ್ಷವಿದೆ. ಅವರ ಪತ್ನಿ ಸರಸ್ವತಮ್ಮ ಬಳಿ ರೂ. 70 ಸಾವಿರ, ಮಕ್ಕಳಾದ ಬಿ.ಎನ್.ಶಶಿಕಾಂತ್ ಹಾಗೂ ಬಿ.ಎನ್.ಪ್ರೀತಿ ಬಳಿ ಕ್ರಮವಾಗಿ ರೂ. 40 ಸಾವಿರ, ರೂ. 10 ಸಾವಿರ ಇದೆ.

 ನಾರಾಯಣಸ್ವಾಮಿ ಬೆಂಗಳೂರಿನ ಎಸ್.ಬಿ.ಐ., ಎಸ್.ಬಿ.ಎಂ., ಅಪೆಕ್ಸ್ ಬ್ಯಾಂಕ್, ಬಂಗಾರಪೇಟೆಯ ಎಸ್.ಬಿ.ಎಂ., ಕ್ಯಾಸಂಬಳ್ಳಿಯ ಪಿಜಿಬಿ ಬ್ಯಾಂಕ್‌ಗಳಲ್ಲಿ ಕ್ರಮವಾಗಿ ರೂ. 11,000, ರೂ. 67,125, ರೂ. 44,169, ರೂ. 33,939, ರೂ. 1,532 ಠೇವಣಿ ಹೊಂದಿದ್ದಾರೆ. ಒಟ್ಟು ರೂ. 12 ಲಕ್ಷ ಮುಖಬೆಲೆಯ ಎಲ್.ಐ.ಸಿ. 5 ಬಾಂಡ್‌ಗಳಿವೆ. ರೂ. 50 ಸಾವಿರ ಮೌಲ್ಯದ ಅಂಬಾಸಿಡರ್, ರೂ. 11 ಲಕ್ಷ ಮೌಲ್ಯದ ಹೋಂಡಾಸಿಟಿ ಕಾರುಗಳಿವೆ. ರೂ. 1.5 ಲಕ್ಷ ಮೌಲ್ಯದ 45 ಗ್ರಾಂ ಚಿನ್ನಾಭರಣಗಳಿವೆ. ಕ್ಯಾಸಂಬಳ್ಳಿಯಲ್ಲಿ ಸರ್ವೇ ನಂ. 39 ರಲ್ಲಿ ರೂ. 60,500 ಮೌಲ್ಯದ 2 ಎಕರೆ ಜಮೀನು, ಸರ್ವೇ ನಂ. 42 ರಲ್ಲಿ ರೂ. 2,98,500 ಮೌಲ್ಯದ 6.2 ಎಕರೆ ಜಮೀನು, ಸರ್ವೇ. ನಂ. 44 ರಲ್ಲಿ ರೂ. 10,500 ಮೌಲ್ಯದ 0.17 ಎಕರೆ, ಬೆಳಗಾನಹಳ್ಳಿಯ ಸರ್ವೇ ನಂ. 98/1 ರಲ್ಲಿ ರೂ. 10,500 ಮೌಲ್ಯದ 1 ಎಕರೆ ಕೃಷಿ ಭೂಮಿ ಸೇರಿದಂತೆ ಒಟ್ಟಾರೆ ರೂ. 3,80 ಲಕ್ಷ ಮೌಲ್ಯದ 9.3  ಎಕರೆ ಒಟ್ಟು ಕೃಷಿ ಭೂಮಿಯಿದೆ. ಕ್ಯಾಸಂಬಳ್ಳಿಯಲ್ಲಿ ರೂ. 6 ಲಕ್ಷ ಮೌಲ್ಯದ ಮನೆಯೊಂದಿದೆ. ರೂ.30,77,654 ಮೌಲ್ಯದ ಚರ, ರೂ. 16,84 ಲಕ್ಷ ಮೌಲ್ಯದ ಸ್ಥಿರ ಆಸ್ತಿಗಳಿವೆ.

ಪತ್ನಿ ಸರಸ್ವತಮ್ಮ ಅವರ ಹೆಸರಿನಲ್ಲಿ ಕ್ಯಾಸಂಬಳ್ಳಿಯ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಬ್ಯಾಂಕಿನಲ್ಲಿ 3 ಪ್ರತ್ಯೇಕ ಖಾತೆಗಳಲ್ಲಿ ಒಟ್ಟು ರೂ. 4,47,749 ಲಕ್ಷ ಠೇವಣಿ ಹೊಂದಿದ್ದಾರೆ. ರೂ. 4 ಲಕ್ಷ ಮುಖ ಬೆಲೆಯ 3 ಎಲ್‌ಐಸಿ ಬಾಂಡ್‌ಗಳಿವೆ. ಇನ್ನೂ ಒಂದು ಬಾಂಡಿನ ವಿವರವನ್ನು ನಮೂಧಿಸಿಲ್ಲ. ಅವರ ಬಳಿ ರೂ. 12 ಲಕ್ಷ ಮೌಲ್ಯದ 800 ಗ್ರಾಂ ಚಿನ್ನ, ರೂ.3 ಲಕ್ಷ ಮೌಲ್ಯದ 8.5 ಕೆ.ಜಿ.ಬೆಳ್ಳಿಯಿದೆ. ರೂ. 22,63,445 ಮೌಲ್ಯದ ಚರ, ರೂ. 4 ಲಕ್ಷ ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದು ರೂ. 38,585 ಮೌಲ್ಯದ ಟ್ರಾಕ್ಟರ್ ಸಾಲ ಪಡೆದಿದ್ದಾರೆ. 

 ಮಕ್ಕಳಾದ ಶಶಿಕಾಂತ್ ಹೆಸರಿನಲ್ಲಿ ಬಂಗಾರಪೇಟೆ ಎಸ್.ಬಿ.ಐ.ನಲ್ಲಿರುವ ಖಾತೆಯಲ್ಲಿ ರೂ 2 ಸಾವಿರ ಠೇವಣಿಯಿದೆ. ರೂ. 50 ಸಾವಿರ ಮೌಲ್ಯದ 50 ಗ್ರಾಂ ಚಿನ್ನವಿದೆ. ಪ್ರೀತಿ ಹೆಸರಿನಲ್ಲಿ  ರೂ. 2.5 ಲಕ್ಷ ಮೌಲ್ಯದ 80 ಗ್ರಾಂ ಚಿನ್ನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.