ADVERTISEMENT

ಲೋಕಾಯುಕ್ತ ಬಲೆಗೆ ಎಂಜಿನಿಯರ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 7:05 IST
Last Updated 11 ಜೂನ್ 2011, 7:05 IST

ಮುಳಬಾಗಲು: ಗ್ರಾ.ಪಂ. ಸದಸ್ಯರಿಂದ ಶಾಲಾ ಕಟ್ಟಡ ಹಾಗೂ ನೀರು ಪೂರೈಕೆ ಕಾಮಗಾರಿಗೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದರು ಎಂದು ಜಿ.ಪಂ. ಉಪವಿಭಾಗದ ಕಿರಿಯ ಎಂಜಿನಿಯರ್ ಶುಕ್ರವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಗ್ರಾ.ಪಂ. ಅನುದಾನದಡಿ ಶಾಲೆಗೆ ಆವರಣ ಗೋಡೆ ನಿರ್ಮಾಣ ಹಾಗೂ ನೀರು ಸರಬರಾಜು ಕಾಮಗಾರಿ ಮುಗಿದು ಎಂಟು ತಿಂಗಳಾದರೂ ರೂ.10 ಸಾವಿರ ಬಿಲ್‌ಗೆ ರೂ. 3 ಸಾವಿರ  ಬೇಡಿಕೆಯನ್ನು ಕಿರಿಯ ಎಂಜ ನಿಯರ್ ನಾಗರಾಜ್ ಇಟ್ಟಿದ್ದರು. ಆಗ ಗ್ರಾ.ಪಂ. ಸದಸ್ಯ ವೆಂಕಟರಾಮಪ್ಪ ಲೋಕಾಯುಕ್ತ ಅವರಿಗೆ ಮಾಹಿತಿ ನೀಡಿದ್ದಾರೆ. ಜಿ.ಪಂನ ಎಂಜನಿಯರಿಂಗ್ ಕಚೇರಿಯಲ್ಲಿ ಹಣ ಪಡೆಯುವ ವೇಳೆ ಯಲ್ಲಿ ನಾಗರಾಜ್ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಎಸ್.ಪಿ.ಸುಧಾ ಕರ್ ಮಾರ್ಗದರ್ಶನದಲ್ಲಿ, ಇನ್ಸ್ ಪೆಕ್ಟರ್ ಲೋಕೇಶ್, ಸಿಬ್ಬಂದಿ ವಿಜಯ ಕುಮಾರ್, ನರಸಿಂಹಯ್ಯ, ದಿನಕರ್, ಶ್ರೀನಿವಾಸ್, ಕೃಷ್ಣಪ್ಪ ಅವರು ಭಾಗವಹಿಸಿದ್ದರು. ಆರೋಪಿಯನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.