ADVERTISEMENT

ವೆಚ್ಚಗಳ ಪಾರದರ್ಶಕ ದಾಖಲೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 5:50 IST
Last Updated 13 ಏಪ್ರಿಲ್ 2013, 5:50 IST

ಕೋಲಾರ: ಅಭ್ಯರ್ಥಿಗಳ ಚುನಾವಣೆ ವೆಚ್ಚಗಳ ಕುರಿತು ಪಾರದರ್ಶಕ ದಾಖಲೀಕರಣ ನಡೆಯಬೇಕು ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕ ವಿ.ಜಸ್ಟಿನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಯುಗಾದಿಯ ದಿನವಾದ ಗುರುವಾರ ಕೋಲಾರ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಂಚಾರಿ ಜಾಗೃತ ದಳ ಹಾಗೂ ಸರ್ವೇಲೆನ್ಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಅಭ್ಯರ್ಥಿಗಳ ವೆಚ್ಚ ಕುರಿತು ದಾಖಲಿಸುವ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ರೀತಿ ಮುಚ್ಚುಮರೆ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ನುಡಿದರು.

ಅಭ್ಯರ್ಥಿಗಳ ಎಲ್ಲ ವೆಚ್ಚವನ್ನು ಪಾರದರ್ಶಕವಾಗಿ ದಾಖಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಾಗೃತ ದಳದ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸಮಸ್ಯೆಗಳು ಎದುರಾದರೆ ಕೂಡಲೇ ತಮ್ಮನ್ನು ಸಂಪರ್ಕಿಸಬೇಕು ಎಂದು ನಿರ್ದೇಶಿಸಿದರು.

ಸಾಗಾಣಿಕೆಗೆ ತಡೆ: ವಾಹನಗಳ ತೀವ್ರ ತಪಾಸಣೆ ಮಾಡಿದರೆ ಮಾತ್ರ ಸಾಗಣೆ ತಡೆಯಲು ಸಾಧ್ಯ. ಆ ಬಗ್ಗೆ ಮಾಹಿತಿ ಸಂಗ್ರಹಿಸುವುದು ಅತ್ಯಗತ್ಯ. ಮಾಹಿತಿ ಸಂಗ್ರಹಿಸಿದ ಬಳಿಕ ಕಾರ್ಯಾಚರಣೆ ಹಮ್ಮಿಕೊಳ್ಳಬೇಕು. ದಿನದ 24 ಗಂಟೆಯೂ ಎಚ್ಚರಿಕೆಯಿಂದಿರಬೇಕು ಎಂದರು. ಚುನಾವಣಾಧಿಕಾರಿ ಡಾ.ವೆಂಕಟೇಶಮೂರ್ತಿ ಉಪಸ್ಥಿತರಿದ್ದರು.

ಅಕ್ರಮ: ದೂರು ನೀಡಿ
ಕೋಲಾರ:
ಮತದಾರರಿಗೆ ಮದ್ಯ ಸಾಗಣೆ ಅಕ್ರಮ ಚಟುವಟಿಕೆಗಳ ಕುರಿತು ತಿಳಿದುಬಂದರೆ ಸಾರ್ವಜನಿಕರು ಕೂಡಲೇ ಮಾಹಿತಿ ನೀಡಬೇಕು ಎಂದು ಅಬಕಾರಿ ಮತ್ತು ಲಾಟರಿ ನಿಷೇದ ದಳ ವಿಶೇಷ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಲಾನಿ ತಿಳಿಸಿದ್ದಾರೆ.

ಬಂಗಾರಪೇಟೆ ತಾಲ್ಲೂಕಿನ ಬಂಗಾರಪೇಟೆ ಮತ್ತು ಕೆಜಿಎಫ್ ವಿಧಾನ ಸಭಾ ಕ್ಷೇತ್ರಗಳ ಸಾರ್ವಜನಿಕರು ಈ ಕೆಳಗಿನವರನ್ನು ಸಂಪರ್ಕಿಸಬಹುದು ಎಂದಿದ್ದಾರೆ.ವಿಶೇಷ ಪೊಲೀಸ್ ಠಾಣೆ 08153-253500, ಎ.ರಾಜೀವ್ ಪೊಲೀಸ್ ಇನ್ಸ್‌ಪೆಕ್ಟರ್ -9449845008, ಹೆಡ್  ಕಾನ್ಸ್‌ಟೆಬಲ್‌ಗಳಾದ ದೇವರಾಜ್ 9448839034,  ಲಕ್ಷ್ಮಣ್‌ರಾವ್- 9880113423, ವೆಂಕಟರಾಮಯ್ಯ -9449189126, ಕೆ.ವಾಸುದೇವ ಸಿಂಗ್ -9731115100,  ಕಾನ್ಸ್‌ಟೆಬಲ್ ರಾಮಕೃಷ್ಣಾರೆಡ್ಡಿ 9448985792.

ಮದ್ಯ ಹಂಚಿಕೆ: ದೂರು ಕೊಡಿ
ಕೆಜಿಎಫ್ ಉಪ ವಿಭಾಗ ವ್ಯಾಪ್ತಿಯ ಬಂಗಾರಪೇಟೆ ಮತ್ತು ಮುಳಬಾಗಲು ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕರಿಸಲು ಅಬಕಾರಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕಿ ಎಂ.ಆರ್. ಸುಮಾ ಕೋರಿದ್ದಾರೆ. ಕೆಜಿಎಫ್ ಉಪ ವಿಭಾಗದ ಕಂಟ್ರೋಲ್ ರೂಂ ಸಂಖ್ಯೆ: 08153-260134, ಮೊಬೈಲ್: 9449597043, 9449597044, ವಿಳಾಸ: ಅಬಕಾರಿ ಉಪ ಅಧೀಕ್ಷಕರ ಕಚೇರಿ, ಪಾರಂಡಹಳ್ಳಿ ರಸ್ತೆ, ರಾಬರ್ಟ್‌ಸನ್‌ಪೇಟೆ, ಕೆಜಿಎಫ್.

ಪ್ರಚಾರ ಸಾಮಗ್ರಿ ಮಾಹಿತಿ ಕಡ್ಡಾಯ
ಕೋಲಾರ:
ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮುದ್ರಿಸುವ ಕರಪತ್ರ, ಬ್ಯಾನರ್, ಪೋಸ್ಟರ್ ಸೇರಿದಂತೆ ಮುದ್ರಣ ಸಾಮಗ್ರಿಗಳ ಪ್ರತಿಯನ್ನು ಜಿಲ್ಲಾಮಟ್ಟದ ಮಾಧ್ಯಮ ದೃಢೀಕರಣ ಹಾಗೂ ಉಸ್ತುವಾರಿ ಸಮಿತಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ತಿಳಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಗಳು ಮುದ್ರಣ ಸಾಮಗ್ರಿಗಳ ಮೇಲೆ ಮುದ್ರಕರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಮುದ್ರಿಸಿರಲೇಬೇಕು. ಪತ್ರಿಕೆಗಳಲ್ಲಿ ಪ್ರಕಟವಾಗುವ ಚುನಾವಣಾ ಜಾಹೀರಾತುಗಳ ವೆಚ್ಚಗಳನ್ನು ಪ್ರತಿದಿನ ಪ್ರತ್ಯೇಕ ಪುಸ್ತಕದಲ್ಲಿ ದಾಖಲು ಮಾಡಬೇಕು ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ವರದಿ ಸಲ್ಲಿಸಬೇಕು ಎಂದಿದ್ದಾರೆ. ಸ್ಥಳೀಯ ಟಿವಿ  ಚಾನಲ್‌ಗಳಲ್ಲಿ ಪ್ರಸಾರ ಮಾಡುವಾಗ ಸಿ.ಡಿ ಅಥವಾ ಡಿವಿಡಿಗಳನ್ನು ಮಾಧ್ಯಮ ದೃಢೀಕರಣ ಸಮಿತಿಗೆ ಸಲ್ಲಿಸಿ ಅದರ ವೆಚ್ಚಗಳ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು.

ಜಾಹೀರಾತು ನೀಡುವಾಗ ಪ್ರಯೋಜಕರ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು. ಅಂಥ  ಜಾಹೀರಾತುಗಳನ್ನು ಸಹ ವೆಚ್ಚದ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ದೃಶ್ಯ ಮಾಧ್ಯಮಗಳ ಪ್ರಸಾರಕ್ಕೆ 10 ಸೆಕೆಂಡ್‌ಗೆ ದರಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ವೆಚ್ಚ ವೀಕ್ಷಕರ ನೇಮಕ
ವೀಕ್ಷಕರ ನೇಮಕವಾಗಿದ್ದು ಅಧಿಕಾರಿಗಳ ವಿವರ ಹೀಗಿದೆ.
ಜಗದೀಶ್-(ಶ್ರೀನಿವಾಸಪುರ,ಮುಳಬಾಗಿಲು)- 9408790003,
ನಿಲೇಶ್‌ಕುಮಾರ್ (ಕೆಜಿಎಫ್, ಬಂಗಾರಪೇಟೆ) 9871731247,
ವಿ. ಜಸ್ಟಿನ್ (ಕೋಲಾರ) 9445953074,
ಟಿ.ರಾಮಲಿಂಗಂ (ಮಾಲೂರು) 9445960877

ಮಾಧ್ಯಮ ನೋಡಲ್ ಅಧಿಕಾರಿ ನೇಮಕ
ಜಿಲ್ಲಾ ಮಟ್ಟದ ಮಾಧ್ಯಮ ಕೇಂದ್ರ ನೋಡಲ್ ಅಧಿಕಾರಿಯನ್ನಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ಜುಲ್ಫಿಖಾರ್‌ಉಲ್ಲಾ ಅವರನ್ನು ನೇಮಕ ಮಾಡಲಾಗಿದೆ.  ಅವರ ಮೊಬೈಲ್ ಸಂಖ್ಯೆ 9480870000.
ನಾಮಪತ್ರಗಳ ಸಲ್ಲಿಕೆ, ಅಫಿಡೆವಿಟ್ ಹಾಗೂ ಇತರೆ ಮಾಹಿತಿಗಾಗಿ ಸಾರ್ವಜನಿಕರು, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮಾಧ್ಯಮ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಕಾನೂನು ಕೇಂದ್ರ ಸ್ಥಾಪನೆ
ಚುನಾವಣೆ ಸುಸೂತ್ರವಾಗಿ ನಡೆಯಲು ಜಿಲ್ಲಾ ಮಟ್ಟದ ಕಾನೂನು ಕೇಂದ್ರವನ್ನು ಸ್ಥಾಪಿಸಲಾಗಿದೆ. 
ಕೇಂದ್ರದ ನೋಡಲ್ ಅಧಿಕಾರಿಯನ್ನಾಗು ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ (9731930970) ಮತ್ತು ಕಾನೂನು ಕಾಲೇಜಿನ ಉಪನ್ಯಾಸಕಿ ಎಚ್.ಎಂ.ಸುಮನ (990295746) ಅವರನ್ನು ನೇಮಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.