ADVERTISEMENT

ಸಮಾಜದ ಅಭಿವೃದ್ಧಿಗೆ ಶಿಕ್ಷಕರು ಅಗತ್ಯ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:47 IST
Last Updated 6 ಸೆಪ್ಟೆಂಬರ್ 2013, 6:47 IST

ಬಂಗಾರಪೇಟೆ: ಉತ್ತಮ ಗುಣಗಳನ್ನು ಹೊಂದಿರುವ  ಶಿಕ್ಷಕರು ಸಮಾಜದ ಅಭಿವೃದ್ಧಿಗೆ ಅತ್ಯವಶ್ಯ ಎಂದು  ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಎಸ್.ಎನ್.ಕನ್ವೆಷನ್ ಹಾಲ್‌ನಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕ ಸಮಾಜದಲ್ಲಿನ ತೊಡಕುಗಳನ್ನು ಹೋಗಲಾಡಿಸಿ ಉತ್ತಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರೂಢಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯ ಎಂದರು.

ಗುರು ಭವನ ನಿರ್ಮಾಣಕ್ಕೆ ರೂ. 7 ಲಕ್ಷ ಅನುದಾನ, ಸರ್ಕಾರಿ ನೌಕರರ ಸಂಘಕ್ಕೆ ನಿವೇಶನ ನೀಡುವುದಾಗಿ ಅವರು ಹೇಳಿದರು.
ನಿವೃತ್ತ ಅಧಿಕಾರಿ ಸಿ.ಬಿ.ಹನುಮಂತಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಚಂದ್ರಶೇಖರಗೌಡ, ಶಿಕ್ಷಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಜಿ.ವಿ.ಅಪ್ಪಾಜಿಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಯರಾಜ್, ಕಾರ್ಯ ನಿರ್ವಹಣಾಧಿಕಾರಿ ಡಾ.ಜಗದೀಶ್ ಮಾತನಾಡಿದರು.

ಡಾ.ರಾಧಾಕೃಷ್ಣನ್  ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ಜಿಲ್ಲಾಮಟ್ಟದ ಉತ್ತಮ ಶಿಕ್ಷಕರಾಗಿ ಆಯ್ಕೆಯಾದ ಕೆ.ನಿರ್ಮಲ, ಎಲ್.ವಿಜಯಕುಮಾರ್ ಹಾಗೂ ನಿವೃತ್ತ ಶಿಕ್ಷಕರಾದ ಎ.ಮೇರಿ, ಎಂ.ಹನುಮಂತಯ್ಯ, ಎಂ.ಮುನಯ್ಯ, ಅಂಜಲಿದೇವಿ, ದೂರ್ ಇಷಾವರ್, ಕೆ.ಎಸ್.ರಾಮಮೂರ್ತಿ, ಸುಂದರಮ್ಮ, ಚನ್ನಪ್ಪ, ವೈ.ಎನ್.ಗಂಗಾಧರಯ್ಯ, ಜಯಮ್ಮ, ಎಚ್.ವಿಜಯಲಕ್ಷ್ಮೀ, ಟಿ.ನಿರ್ಮಲ, ಭೀಮೇಗೌಡ, ಡಿ.ನಾರಾಯಣಪ್ಪ, ಆರ್.ನಂಜುಂಡಪ್ಪ, ಪಿ.ಆರ್.ನಾಗರತ್ನಮ್ಮ, ಮುನಿರತ್ನಪ್ಪ, ದಿಲ್ ಷಾದ್ ಬೇಗಂ, ವೈ.ಸುಜಾತಾ, ಸೈಯದ್ ಏಜಾಜ್ ಪಾಷಾ, ದೇವಕುಮಾರ್, ಸುಶೀಲಮ್ಮ, ಸಿ.ಆರ್.ಕೃಷ್ಣಮೂರ್ತಿ, ಆರ್.ಮುನಿಲಕ್ಷ್ಮೀ, ಶ್ರೀರಾಮಚಂದ್ರ, ಪಾರ್ವತಮ್ಮ, ಮುನಿಯಪ್ಪ, ಎನ್.ವಿಜಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಅಮೆರಿಕದಲ್ಲಿ ನಡೆದ ಕುಬ್ಜರ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕ್ರೀಡಾಪಟು ನಾಗೇಶ್ ಅವರನ್ನು ಅಭಿನಂದಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಆ.ಮು.ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸಂಪಂಗಿರೆಡ್ಡಿ, ಎಪಿಎಂಸಿ ಅಧ್ಯಕ್ಷ ಮಹೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಶಂಕರಪ್ಪ, ತಾಲ್ಲೂಕು ಕಸಾಪ ಘಟಕ ಅಧ್ಯಕ್ಷ ಆರ್.ಅಶ್ವತ್ಥ್, ಪುರಸಭೆ ಸದಸ್ಯರಾದ ಆರೋಗ್ಯ ರಾಜನ್, ಕೆ.ಚಂದ್ರಾರೆಡ್ಡಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.