ADVERTISEMENT

ಸ್ವಯಂ ಪ್ರೇರಿತರಾಗಿ ಪ್ರಚಾರ ನಡೆಸಿದರೆ ಕ್ರಮ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 12:09 IST
Last Updated 30 ಮಾರ್ಚ್ 2018, 12:09 IST

ಮುಳಬಾಗಿಲು: ಸ್ವಯಂ ಘೋಷಿತವಾಗಿ ನಾನೇ ಅಭ್ಯರ್ಥಿ ಎಂದು ಪ್ರಚಾರ ನಡೆಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗಾರ್ಜುನ ಎಚ್ಚರಿಸಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಯಾವ ಕ್ಷೇತ್ರದ ಅಭ್ಯರ್ಥಿಯ ಹೆಸರು ಇದುವರೆಗೂ ಘೋಷಣೆಯಾಗಿಲ್ಲ. ನಾನೇ ಅಭ್ಯರ್ಥಿ ಎಂದು ಸ್ವಯಂ ಘೋಷಿಸಿಕೊಂಡು ಪ್ರಚಾರ ನಡೆಸುವವರ ವಿರುದ್ಧ ಮಾಹಿತಿ ನೀಡುವಂತೆ ರಾಜ್ಯ ಬಿಜೆಪಿ ನಾಯಕರು ತಿಳಿಸಿದ್ದಾರೆ’ ಎಂದು ಹೇಳಿದರು.

ಬಿಜೆಪಿಯಿಂದ ಕೆ.ಎಂ.ಶ್ರೀನಿವಾಸ್, ನಾರಾಯಣಪ್ಪ, ಎಂ.ವೇಣುಗೋಪಾಲ್, ಕೆ.ಸಿ.ಮುನಿಯಪ್ಪ, ನವೀನ್‌ ಕುಮಾರ್, ಗೋವಿಂದ್, ಬಿ.ದೇವಾನಂದ್ ಆಂಕಾಂಕ್ಷಿಗಳಾಗಿದ್ದು, ಇವರು ಯಾವುದೇ ಕಾರ್ಯಕ್ರಮ ನಡೆಸಬೇಕಾದರೆ ತಾಲ್ಲೂಕು ಸಮಿತಿ ಯಿಂದ ಅನುಮತಿ ಪಡೆಯಬೇಕು ಎಂದರು.ನಾಯಕರ ಆದೇಶವನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಆಕಾಂಕ್ಷಿಗಳು ಪ್ರತ್ಯೇಕವಾಗಿ ಪ್ರಚಾರ ಮಾಡುವುದಾಗಲೀ ಅಥವಾ ನಾನೇ ಅಭ್ಯರ್ಥಿಯೆಂದು ಹೇಳುವುದಾಗಲೀ ಮಾಡಬಾರದು ಎಂದು ಸಲಹೆ ನೀಡಿದರು.

ನಗರ ಘಟಕದ ಅಧ್ಯಕ್ಷ ಟಿ.ಎಂ.ಶ್ರೀನಿವಾಸ್, ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿಗಳಾದ ಮುನಿರಾಜು, ಬಿ.ಕೆ.ಅಶೋಕ್, ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ಸೋಮಶೇಖರ್, ಎಸ್‌ಸಿ ಮೋರ್ಚಾ ಕಾರ್ಯದರ್ಶಿ ನಾಗರಾಜ್ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.