ADVERTISEMENT

ಕಾಂಗ್ರೆಸ್‌ನ 110 ಮಹಿಳೆಯರಿಂದ ಟಿಕೆಟ್‌ಗೆ ಅರ್ಜಿ: ಪುಷ್ಪಾ ಅಮರನಾಥ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 5:00 IST
Last Updated 11 ಮಾರ್ಚ್ 2023, 5:00 IST

ಕೋಲಾರ: ‘ಮುಂಬರುವ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕೋರಿ 110 ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಕೆಲವರ ಹೆಸರನ್ನು ವರಿಷ್ಠರ ಗಮನಕ್ಕೆ ತರಲಾಗಿದ್ದು, ಹೆಚ್ಚಿನ ಟಿಕೆಟ್‌ಗೆ ಬೇಡಿಕೆ ಇಡಲಾಗಿದೆ’ ಎಂದು ಪುಷ್ಪಾ ಅಮರನಾಥ್ ತಿಳಿಸಿದರು.

‘224 ಕ್ಷೇತ್ರಗಳಲ್ಲಿ ಪುರುಷರಿಗೆ ‌ಸರಿ ಸಮನಾಗಿ ಸವಾಲು ಹಾಕುವ, ಗೆಲ್ಲುವ ಅವಕಾಶವಿರುವ ಮಹಿಳೆಯರಿಗೆ ಟಿಕೆಟ್‌ ಸಿಗಲಿದೆ. ನಾನೂ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಅವಕಾಶ ಸಿಕ್ಕರೆ ಸ್ಪರ್ಧಿಸುತ್ತೇನೆ’ ಎಂದರು.

‘ಕಾಂಗ್ರೆಸ್‌ ಘೋಷಿಸಿರುವ ಗ್ಯಾರಂಟಿಯಾದ ಪ್ರತಿ ಯಜಮಾನಿಗೆ ತಿಂಗಳಿಗೆ ₹ 2 ಸಾವಿರ ನನಗೂ ಸಿಗುತ್ತದೆ, ಡಿ.ಕೆ.ಶಿವಕುಮಾರ್‌ ಅವರ ಪತ್ನಿ ಉಷಾಕ್ಕಗೂ ಸಿಗುತ್ತದೆ. ಪತ್ರಕರ್ತರಾದ ನಿಮ್ಮ ಮನೆಯವರಿಗೂ ಸಿಗಲಿದೆ. ಬೇಡವೆಂದರೆ ಬರೆದುಕೊಡಬಹುದು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.