ಮುಳಬಾಗಲು: ಪ್ರಸಕ್ತ ಸಾಲಿನ ಪುರಸಭೆಯ 17.26 ಬಜೆಟ್‌ಗೆ ಶುಕ್ರವಾರ ನಡೆದ ಬಜೆಟ್ ಅಧಿವೇಶನ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಪುರಸಭೆ ಅಧ್ಯಕ್ಷ ಡಾ.ರಹಮತ್ ಉಲ್ಲಾಖಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಮೋದಿಸಲಾಯಿತು.
ಸದಸ್ಯರು ಕುಡಿಯುವ ನೀರಿನ ಅಭಾವ ಪಟ್ಟಣದಲ್ಲಿ ತೀವ್ರವಾಗಿದ್ದು, ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.
ಬಿಸಿಲಿನ ಬೇಗೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ತಕ್ಷಣ ಫಾಗಿಂಗ್ ಮೂಲಕ ಸೊಳ್ಳೆ ಹಾವಳಿ ನಿಯಂತ್ರಿಸುವಂತೆ ಸದಸ್ಯರು ಅಧ್ಯಕ್ಷರ ಗಮನಕ್ಕೆ ತಂದರು.
`ಮುಖ್ಯ ಬಜಾರ್ ರಸ್ತೆ ಹದಗೆಟ್ಟು ಹಲವು ತಿಂಗಳಗಳು ಉರುಳಿವೆ. ಪಟ್ಟಣದ ಹಲವು ಕಡೆ ವಿದ್ಯುತ್ ದೀಪ ಗಳಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ , ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪ ಶ್ರೀನಿ ವಾಸ್, ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಶ್ರೀನಿವಾಸ ಮೂರ್ತಿ, ತಾಯಲೂರು ನಾಗರಾಜ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.