ADVERTISEMENT

3 ದಿನದಲ್ಲಿ ನಿರ್ಧಾರ: ಕೃಷ್ಣಯ್ಯಶೆಟ್ಟಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 6:41 IST
Last Updated 19 ಮಾರ್ಚ್ 2014, 6:41 IST

ಮಾಲೂರು: ಮೂರು ದಿನಗಳ ಒಳ­ಗಾಗಿ ತಮ್ಮ ರಾಜಕೀಯ ನಡೆಯನ್ನು ನಿರ್ಧರಿಸುವುದಾಗಿ ಮಾಜಿ ಸಚಿವ ಎಸ್‌.ಎನ್.ಕೃಷ್ಣಯ್ಯಶೆಟ್ಟಿ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಬೆಂಬಲಿಗರ ಸಭೆಯಲ್ಲಿ ಚರ್ಚಿಸಿ 3 ದಿನಗಳಲ್ಲಿ ತಮ್ಮ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ಬಿಜೆಪಿ ಸೇರ್ಪಡೆ ಮುಗಿದ ಅಧ್ಯಾಯ. ಕಾಂಗ್ರೆಸ್‌ ವರಿಷ್ಠರು 3 ದಿನ ಅವಕಾಶ ಕೇಳಿದ್ದಾರೆ. ಅಧಿಕೃತ ಸೇರ್ಪಡೆಗೆ ಅವಕಾಶ ಸಿಗದಿದ್ದರೆ ಬೆಂಬಲಿಗ­ರೊಬ್ಬ­ರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿ­ಳಿಸಲು ತೀರ್ಮಾನಿಸಲಾಗುವುದು ಎನ್ನುತ್ತಿ­ದ್ದಂತೆ ಬೆಂಬಲಿಗರು ಸಹ ಮತ ವ್ಯಕ್ತ ಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎ.ರಾಮಸ್ವಾಮಿರೆಡ್ಡಿ, ಯಲ್ಲಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಶಾ ರಾಜಪ್ಪ, ಸದಸ್ಯರಾದ ಆನಂದ್, ಗೋಪಾಲ­ಗೌಡ, ಚಂದ್ರಪ್ಪ, ಪುಟ್ಟ­ಸ್ವಾಮಿ, ಎಸ್.ವಿ.ಲೋಕೇಶ್, ಅಮ­ರಾವತಿ, ಕುಂತೂರು ಕೃಷ್ಣಪ್ಪ, ಪುರಸಭೆ ಸದಸ್ಯ ಎಚ್.ವಿ.ಲಿಂಗೇಶ್ವರಯ್ಯ, ನೊಸ­ಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಮುನಿರಾಜು,  ಮುಖಂಡ­ರಾದ ಸಿ.ಎಂ.ನಾರಾಯಣಗೌಡ, ಎ.ಜಿ.­ಸುಬ್ರಮಣ್ಯರೆಡ್ಡಿ, ಸರ್ದಾರ್ ಬೇಗ್, ಎ.ಅಶ್ವಥರೆಡ್ಡಿ, ಎಂ.ಜಿ.ಮಧು­ಸೂಧನ್, ಮಿಂಡಹಳ್ಳಿ ಮುನಿರಾಜು, ದೊಡ್ಡ­ಶಿವಾರ ಶಿವಣ್ಣ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.