ADVERTISEMENT

ಕೋಲಾರದಲ್ಲಿ 3.5 ಸೆ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 4:55 IST
Last Updated 28 ಜುಲೈ 2022, 4:55 IST
ಕೋಲಾರದಲ್ಲಿ ಬುಧವಾರ ಸಂಜೆ ಬಿರುಸಿನ ಮಳೆಯಾಯಿತು
ಕೋಲಾರದಲ್ಲಿ ಬುಧವಾರ ಸಂಜೆ ಬಿರುಸಿನ ಮಳೆಯಾಯಿತು   

ಕೋಲಾರ: ನಗರ ಹಾಗೂ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಬಿರುಸಿನ ಮಳೆಯಾಗಿದೆ.

ಸಂಜೆವರೆಗೆ ನಗರದಲ್ಲಿ ಬಿಸಿಲಿನ ವಾತಾವರಣವಿತ್ತು. 5 ಗಂಟೆ ಸುಮಾರಿಗೆ ಆರಂಭವಾದ ಮಳೆ ತಡರಾತ್ರಿಯವರೆಗೆ ಸುರಿಯುತ್ತಲೇ ಇತ್ತು. ಕೋಲಾರ ನಗರದಲ್ಲಿ ರಾತ್ರಿ 8ರ ಸುಮಾರಿಗೆ 3.5 ಸೆ.ಮೀ ಮಳೆಯಾಗಿತ್ತು.

ರಸ್ತೆ ಗುಂಡಿ ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿತ್ತು. ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

ADVERTISEMENT

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಜನವರಿಯಿಂದ ಜುಲೈ 26ರ ವರೆಗೆ 48.07 ಸೆ.ಮೀ ಮಳೆಯಾಗಿದೆ. ಈ ಅವಧಿಯ ವಾಡಿಕೆ ಮಳೆ 24.04 ಸೆ.ಮೀ. ಶೇ 100ರಷ್ಟು ಮಳೆ ಪ್ರಮಾಣ ಈ ಬಾರಿ ಹೆಚ್ಚಾಗಿದೆ. ಈಗಾಗಲೇ ಜಿಲ್ಲೆಯ ಕೆರೆ, ಕಟ್ಟೆ ಹಾಗೂ ಕಾಲುವೆಗಳು ತುಂಬಿಕೊಂಡಿವೆ.

ಬಿತ್ತನೆ ಚುರುಕಾಗಿದ್ದ ಸಮಯದಲ್ಲಿ ಮಳೆ ಆಗಲಿಲ್ಲ. ಇದರಿಂದ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಕುಂಠಿತಗೊಂಡಿದೆ. ರಾಗಿ ಬಿತ್ತನೆ ಕಾರ್ಯ ಮಾತ್ರಆಗಸ್ಟ್‌ ಅಂತ್ಯದವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.