ADVERTISEMENT

ಪ್ರಗತಿಯ ನಾಗಾಲೋಟದಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 9:08 IST
Last Updated 27 ಜನವರಿ 2018, 9:08 IST

ಮಾಲೂರು: ಭಾರತ ಕಳೆದ 69 ವರ್ಷಗಳಲ್ಲಿ ಪ್ರಗತಿಯ ಹಲವು ಹಂತಗಳನ್ನು ದಾಟಿದೆ. ನಮ್ಮ ಅಭಿವೃದ್ಧಿ ಸಾಧನೆ ಅವಲೋಕಿಸಿದಾಗ ಜಗತ್ತಿನ ಅತ್ಯಂತ ಮುಂದುವರಿದ ದೇಶಗಳಿಗೆ ಸರಿಸಮನವಾಗಿ ಪ್ರಗತಿ ಸಾಧಿಸಲಾಗಿದೆ. ಪ್ರಗತಿಯ ನಾಗಾಲೋಟದಲ್ಲಿ ಇದೆ’ ಎಂದು ಶಾಸಕ ಕೆ.ಎಸ್.ಮಂಜುನಾಥ ಗೌಡ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಸಂವಿಧಾನಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಅಲ್ಲದೆ ಹಕ್ಕುಗಳ ಪ್ರತಿಪಾದನೆಯ ಜತೆಗೆ ಕರ್ತವ್ಯ ಪಾಲನೆಯು ಮುಖ್ಯವಾಗಿದೆ’ ಎಂದರು.

ಪಟ್ಟಣದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರ ಕಟ್ಟಡ ಕಾಮಗಾರಿ, ಮುಸ್ಲಿಮರಿಗೆ ₹ 4ಕೋಟಿ ವೆಚ್ಚದಲ್ಲಿ ಶಾದಿ ಮಹಲ್ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಮಕ್ಕಳಲ್ಲಿ ಜ್ಞಾನ ತುಂಬುವ ಶಿಕ್ಷಕರಿಗಾಗಿ ₹ 3.60ಕೋಟಿ ವೆಚ್ಚದಲ್ಲಿ ಗುರುಭವನ ಕಾಮಗಾರಿ ಭರದಿಂದ ಸಾಗಿದೆ ಎಂದು ತಿಳಿಸಿದರು. ತಾಲ್ಲೂಕಿನ 28 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮದಲ್ಲೂ ಶೌಚಾಲಯ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ ಎಂದರು.

ADVERTISEMENT

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇಒ ಅಮರಪ್ಪ ಹೊಸಪೇಟೆ, ಬಿಇಒ ಮಾಧವರೆಡ್ಡಿ, ಪ್ರಾಧಿಕಾರದ ಅಧ್ಯಕ್ಷ ಕೆ.ಮುನಿರಾಜು, ಪುರಸಭೆ ಅಧ್ಯಕ್ಷ ಎಂ.ರಾಮಮೂರ್ತಿ, ಉಪಾಧ್ಯಕ್ಷೆ ಗೀತಮ್ಮ, ಸದಸ್ಯರಾದ ಸುಲೋಚನಮ್ಮ , ವಿ.ಮಂಜುನಾಥ್, ಮುರಳಿ, ಸಿಒ ಗೀತಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತ್ರಿವರ್ಣ, ಸದಸ್ಯರಾದ ಶ್ರೀನಾಥ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಮ್ಮ, ಸದಸ್ಯರಾದ ಚಿನ್ನಸ್ವಾಮಿ ಗೌಡ, ಎಚ್.ವಿ.ಶ್ರೀನಿವಾಸ್, ಪ್ರಾಂಶುಪಾಲ ರಾಮಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.