ADVERTISEMENT

ಮುಳಬಾಗಿಲು: ಅಮರಜ್ಯೋತಿ ಕಾಲೇಜಿನಲ್ಲಿ ಸಂಕ್ರಾಂತಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:28 IST
Last Updated 15 ಜನವರಿ 2026, 6:28 IST
ಮುಳಬಾಗಿಲು ನಗರದ ಅಮರಜ್ಯೋತಿ ಸ್ನಾತಕೋತ್ತರ ವಿದ್ಯಾಸಂಸ್ಥೆಗಳಲ್ಲಿ ಎಂಬಿಎ ವಿದ್ಯಾರ್ಥಿಗಳು ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸಿದರು
ಮುಳಬಾಗಿಲು ನಗರದ ಅಮರಜ್ಯೋತಿ ಸ್ನಾತಕೋತ್ತರ ವಿದ್ಯಾಸಂಸ್ಥೆಗಳಲ್ಲಿ ಎಂಬಿಎ ವಿದ್ಯಾರ್ಥಿಗಳು ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸಿದರು   

ಮುಳಬಾಗಿಲು: ನಗರದ ಅಮರಜ್ಯೋತಿ ವಿದ್ಯಾಸಂಸ್ಥೆಯ ಎಂಬಿಎ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಬುಧವಾರ ಕಾಲೇಜು ಆವರಣದಲ್ಲಿ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದರು.

ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ವಿವಿಧ ಬಣ್ಣಗಳಿಂದ ಸಾಂಪ್ರದಾಯಿಕ ರಂಗೋಲಿ ಹಾಗೂ ಹಸು, ಕಬ್ಬಿನ ಜಲ್ಲೆ ಚಿತ್ರಣವನ್ನು ಬಿಡಿಸಿದ್ದರು. ಜೊತೆಗೆ ಎಲ್ಲರೂ ಸಂಕ್ರಾಂತಿ ಸಿಹಿಯನ್ನು ಪರಸ್ಪರ ಹಂಚಿಕೊಂಡು ಹಬ್ಬವನ್ನು ಸಂಭ್ರಮಿಸಿದರು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಮಾತನಾಡಿ, ಭಾರತ ದೇಶ ಹಬ್ಬಗಳ ನಾಡು. ಆದರೆ, ಜಾಗತೀಕರಣದ ಪ್ರಭಾವಕ್ಕೆದಿಂದ ಎಲ್ಲರೂ ಮೊಬೈಲ್ ಗೀಳಿಗೆ ಒಳಗಾಗಿ ಹಬ್ಬಗಳ ಆಚರಣೆ ಹಾಗೂ ಸಂಪ್ರದಾಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಹಾಗಾಗಿ ಹಬ್ಬದ ಮಹತ್ವವನ್ನು ಮುಂದಿನ ಜನಾಂಗಕ್ಕೆ ತಿಳಿಸಿ ಆಚರಣೆಗಳನ್ನು ಉಳಿಸಿ ಬೆಳಸಬೇಕು ಎಂದರು.

ADVERTISEMENT

 ಕಾರ್ಯದರ್ಶಿ ಯಲುವಹಳ್ಳಿ ಕೆ.ಅಶೋಕ್ ಕುಮಾರ್, ಪ್ರಾಂಶುಪಾಲರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.