ADVERTISEMENT

ಒತ್ತಡ ನಿವಾರಣೆಯಿಂದ ಮನಸ್ಸಿಗೆ ನೆಮ್ಮದಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 14:24 IST
Last Updated 24 ಜನವರಿ 2020, 14:24 IST
ಕೋಲಾರದಲ್ಲಿ ಸ್ನಾತ್ತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗದಿಂದ ಶುಕ್ರವಾರ ನಡೆದ ಮಾನಸಿಕ ಆರೋಗ್ಯದ ಕುರಿತು ಅರಿವು ಕಾರ್ಯಕ್ರಮಕ್ಕೆ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯ ಮನೋವೈದ್ಯೆ ಡಾ.ಶಿಲ್ಪಾಶ್ರೀ ಚಾಲನೆ ನೀಡಿದರು.
ಕೋಲಾರದಲ್ಲಿ ಸ್ನಾತ್ತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗದಿಂದ ಶುಕ್ರವಾರ ನಡೆದ ಮಾನಸಿಕ ಆರೋಗ್ಯದ ಕುರಿತು ಅರಿವು ಕಾರ್ಯಕ್ರಮಕ್ಕೆ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯ ಮನೋವೈದ್ಯೆ ಡಾ.ಶಿಲ್ಪಾಶ್ರೀ ಚಾಲನೆ ನೀಡಿದರು.   

ಕೋಲಾರ: ‘ಒತ್ತಡಗಳ ನಿಯಂತ್ರಣಕ್ಕಾಗಿ ಮನುಷ್ಯ ಯೋಗ, ಧ್ಯಾನ ಮಾಡಬೇಕು ಸೂಕ್ತ’ ಎಂದು ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯ ಮನೋವೈದ್ಯೆ ಡಾ.ಶಿಲ್ಪಾಶ್ರೀ ತಿಳಿಸಿದರು.

ಬೆಂಗಳೂರಿನ ಉತ್ತರ ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗದಿಂದ ಇಲ್ಲಿನ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯದ ಕುರಿತು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಮನುಷ್ಯನ ಯೌವನದಲ್ಲಿ ಮನಸ್ಸಿನ ತಿರುವುಗಳ ಬದಲಾವಣೆಯಾಗಿ ಮಹತ್ತರದ ಘಟ್ಟಗಳಿಗೆ ತಲುಪುತ್ತಾರೆ. ಇಂತಹ ಸಂದರ್ಭದಲ್ಲಿ ಒತ್ತಡಗಳ ನಿವಾರಣೆಗೆ ಒತ್ತು ನೀಡಬೇಕು. ಮನಸ್ಸನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ಹೇಳಿದರು.

ADVERTISEMENT

ಮನಃಶಾಸ್ತ್ರಜ್ಞ ಬಿ.ಎಂ.ಶ್ರೀನಾಥ್ ಮಾತನಾಡಿ, ‘ಅತಿಯಾಗಿ ಮೊಬೈಲ್ ಬಳಸುವುದರಿಂದ ನಿದ್ರೆ ಸಮಸ್ಯೆ ಎದುರಾಗುತ್ತದೆ. ಅಸಮತೋಲಿತ ಆಹಾರದ ಸೇವನೆಯಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮವಾಗುತ್ತದೆ. ಇದಕ್ಕೆ ಮನೋವೈದ್ಯರ ಸಹಾಯ ಪಡೆಯುವುದು ಉತ್ತಮ. ಮೊಬೈಲ್‌ ಹಾಗೂ ಇಂಟರ್‌ನೆಟ್‌ ಸೌಲಭ್ಯವು ಸದುದ್ದೇಶಕ್ಕೆ ಬಳಕೆಯಾಗಬೇಕು’ ಎಂದು ಸಲಹೆ ನೀಡಿದರು.

ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಗುಂಡಪ್ಪ ಮಾತನಾಡಿ, ‘ಮನುಷ್ಯನ ವ್ಯಕ್ತಿತ್ವ ವಿದ್ಯಾರ್ಥಿ ಜೀವನದ ಹಂತದಲ್ಲಿ ರೂಪುಗೊಳ್ಳುತ್ತದೆ. ಅವರ ಮಿದುಳಿನ ಭಾಗಗಳು ವೃದ್ಧಿಯಾಗುವ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವ, ಸಮಯ ನಿರ್ವಹಣೆ ಮಾಡುವ, ಗುರಿ ಯೋಜಿಸಿಕೊಳ್ಳುವ ಮತ್ತು ಸಮಸ್ಯೆ ಪರಿಹಾಕ್ಕೆ ಸಂಬಂಧಪಟ್ಟಂತೆ ಗೊಂದಲ ಉಂಟಾಗಿ ಆರೋಗ್ಯ ಹಾಳಾಗುತ್ತದೆ’ ಎಂದು ಹೇಳಿದರು.

‘ಮನುಷ್ಯನು ಖಿನ್ನತೆಗೆ ಒಳಗಾದರೇ ಶೈಕ್ಷಣಿಕ ಮತ್ತು ಸಾಮಾಜಿಕ ಒತ್ತಡಗಳ ಜೊತೆಗೆ ಉಂಟಾಗುವ ಪ್ರಮುಖ ಬದಲಾವಣೆಗಳ ಕಾರಣದಿಂದ ಆತ್ಮಹತ್ಯೆ ಎಂತಹ ಕೆಟ್ಟ ಕೆಲಸಗಳಿಗೆ ಹೋಗುತ್ತಾರೆ ಅವುಗಳ ಬಗ್ಗೆ ಪೋಷಕರು ಎಚ್ಚರಿಕೆಯಿಂದ ಇದ್ದು ಯುವಕರ ಮನೋವಿಕಾಸನದ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಸಲಹೆ ನೀಡಿದರು.

ಬಾಪೂಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೋಮಣ್ಣ, ಮುಖ್ಯೋಪಾಧ್ಯಾಯನಿ ಎಂ.ಅನುರಾಧ, ಆರೋಗ್ಯ ನಿರೀಕ್ಷಕ ಸತ್ಯನಾರಾಯಣಗೌಡ, ಸಮಾಜ ಕಾರ್ಯ ವಿಭಾಗಾದ ವಿದ್ಯಾರ್ಥಿಗಳಾದ ಮೌನಿಕಾ, ರಾಜೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.