ಬಂಗಾರಪೇಟೆ: ತಾಲ್ಲೂಕಿನ ತಹಶೀಲ್ದಾರ್ ವಸತಿ ಗೃಹವು ಹದಿನೈದು ವರ್ಷಗಳಿಂದ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ನಗರದ ಕೋಲಾರ ಮುಖ್ಯ ರಸ್ತೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಸಮೀಪದಲ್ಲಿರುವ ತಹಶೀಲ್ದಾರ್ ವಸತಿ ಕೇಂದ್ರವು ಸೂಕ್ತ ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾಗಿದೆ. ಸುಮಾರು ಹದಿನೈದು ವರ್ಷಗಳಿಂದ ವಸತಿ ಗೃಹದಲ್ಲಿ ಯಾವ ಅಧಿಕಾರಿಯೂ ವಾಸವಿಲ್ಲದೆ ಸಾರ್ವಜನಿಕ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಜೊತೆಗೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ತಾಲ್ಲೂಕು ಪಂಚಾಯಿತಿ ಕಚೇರಿಗೆ ಹೊಂದಿಕೊಂಡಿರುವ ವಸತಿ ಗೃಹಕ್ಕೆ ಬಾಗಿಲುಗಳಿಲ್ಲ. ಹಾಗಾಗಿ ಜೂಜಾಟ ಹಾಗೂ ಕುಡುಕರ ಅವಾಸ ಸ್ಥಾನವಾಗಿದೆ. ಕಟ್ಟಡದ ಮುಂದೆ ಗಿಡಗಂಟೆ ಬೆಳೆದು ಯಾರೂ ಒಳಗಡೆ ಪ್ರವೇಶಿದ ಸ್ಥಿತಿ ತಲುಪಿದೆ. ಜೊತೆಗೆ ಮಲ, ಮೂತ್ರ ವಿಸರ್ಜನೆ ತಾಣವಾಗಿ ಪರಿವರ್ತನೆಯಾಗಿದೆ.
ನಗರದ ಕೇಂದ್ರ ಸ್ಥಾನದಲ್ಲಿ ತಹಶೀಲ್ದಾರ್ ವಾಸವಿದ್ದರೆ ಸಾರ್ವಜನಿಕರ ಕೆಲಸಗಳಿಗೆ ಸಹಾಯವಾಗುತ್ತದೆ ಎಂಬ ಉದ್ದೇಶದಿಂದ ನಿರ್ಮಿಸಿದ್ದ ವಸತಿ ಗೃಹ ಅಧಿಕಾರಿಗಳು ವಾಸಿಸದೆ ಶಿಥಿಲಾವಸ್ಥೆ ತಲುಪಿದೆ. ಹಾಗಾಗಿ ಕಟ್ಟಡ ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.
ಶಿಥಿಲಾವಸ್ಥೆಯಲ್ಲಿರುವ ವಸತಿ ಗೃಹವನ್ನು ನೆಲಸಮ ಮಾಡಿ ನೂತನ ವಸತಿ ಗೃಹ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು.ಕೆ.ಎನ್.ಸುಜಾತ ತಹಶೀಲ್ದಾರ್ ಬಂಗಾರಪೇಟೆ
ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಿಸೂಲಿಕೂಂಟೆ ಆನಂದ್. ರಾಜ್ಯಾಧ್ಯಕ್ಷ ದಲಿತ ಸಮಾಜ ಸೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.