ADVERTISEMENT

ಫೆ.2ರಿಂದ ಬೆಂಗಳೂರು-ಮಾರಿಕುಪ್ಪಂ ರೈಲು ಪುನರಾರಂಭ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:13 IST
Last Updated 29 ಜನವರಿ 2026, 6:13 IST
ರೈಲು (ಸಾಂಧರ್ಬಿಕ ಚಿತ್ರ)
ರೈಲು (ಸಾಂಧರ್ಬಿಕ ಚಿತ್ರ)   

ಕೆಜಿಎಫ್‌: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮಾರಿಕುಪ್ಪಂಗೆ ಹೋಗುವ ರೈಲಿನ ಸೇವೆಯನ್ನು ಫೆ. 2ರಿಂದ ಪುನರಾರಂಭ ಮಾಡಲಾಗುವುದು ಎಂದು ರೈಲ್ವೆ ಇಲಾಖೆ ನಿರ್ಧಾರ ತೆಗೆದುಕೊಂಡಿದೆ ಎಂದು ಸಂಸದ ಮಲ್ಲೇಶಬಾಬು ತಿಳಿಸಿದ್ದಾರೆ.

ಬೆಂಗಳೂರಿನಿಂದ ಮಧ್ಯಾಹ್ನ 2.55ಕ್ಕೆ ಬೆಂಗಳೂರು ಬಿಡುವ ರೈಲನ್ನು ಇತ್ತೀಚಿಗೆ ರದ್ದುಗೊಳಿಸಲಾಗಿತ್ತು. ಸಮಯ ಬದಲಾಯಿಸಿ, ವೈಟ್‌ಫೀಲ್ಡ್‌ನಿಂದ ಮಾರಿಕುಪ್ಪಂವರೆವಿಗೂ ಬಿಡಲಾಗಿತ್ತು. ಇದರಿಂದ ಸಾವಿರಾರು ಮಂದಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆ ವಿಭಾಗೀಯ ರೈಲ್ವೆ ಮಾನೇಜರ್‌ ಅವರಿಗೆ ಪತ್ರ ಬರೆದಿದ್ದ ಸಂಸದ ಸಾರ್ವಜನಿಕರ ಕೋರಿಕೆ ಮೇರೆಗೆ ಹಿಂದಿನ ರೀತಿಯಲ್ಲಿ ರೈಲ್ವೆ ಸೇವೆಯನ್ನು ಪುನರಾರಂಭಿಸಬೇಕು ಎಂದು ಕೋರಿದ್ದರು.

ಈ ಹಿನ್ನೆಲೆ ಫೆ. 2ರಿಂದ ಹಿಂದಿನ ರೀತಿಯಲ್ಲಿಯೇ ಬೆಂಗಳೂರು-ಮಾರಿಕುಪ್ಪಂ ಮೆಮೂ ರೈಲಿನ ಸಂಚಾರ ಪ್ರಾರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.